ಸರ್ಕಾರದ ಯೋಜನೆ ಅನುಷ್ಠಾನಗೊಳಿಸಿ

ಎನ್.ಆರ್.ಪುರ ತಾಪಂ ಸಾಮರ್ಥ್ಯಸೌಧದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರಕ್ಕೆ ಪಪಂ ಅಧ್ಯಕ್ಷೆ ಜುಬೇದಾ ಚಾಲನೆ ನೀಡಿದರು. ವೀರಭದ್ರಯ್ಯ ಮಾಜಿಗೌಡ್ರ, ನಳಿನಾಕ್ಷಿ, ಸಾವಿತ್ರಮ್ಮ, ಕಾವ್ಯಶ್ರೀ, ನವಾಜ್, ಪ್ರದೀಪ್, ಅನಿತಾ, ಶೈಲಾ ಇತರರಿದ್ದರು.
ಎನ್.ಆರ್.ಪುರ ತಾಪಂ ಸಾಮರ್ಥ್ಯಸೌಧದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರಕ್ಕೆ ಪಪಂ ಅಧ್ಯಕ್ಷೆ ಜುಬೇದಾ ಚಾಲನೆ ನೀಡಿದರು. ವೀರಭದ್ರಯ್ಯ ಮಾಜಿಗೌಡ್ರ, ನಳಿನಾಕ್ಷಿ, ಸಾವಿತ್ರಮ್ಮ, ಕಾವ್ಯಶ್ರೀ, ನವಾಜ್, ಪ್ರದೀಪ್, ಅನಿತಾ, ಶೈಲಾ ಇತರರಿದ್ದರು.
Published on
ಎನ್.ಆರ್.ಪುರ: ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಪಪಂ ಅಧ್ಯಕ್ಷೆ ಜುಬೇದಾ ತಿಳಿಸಿದರು. 
ತಾಪಂ ಸಾಮರ್ಥ್ಯ ಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಹಭಾಗಿತ್ವದಲ್ಲಿ ಪೋಷಣ್ ಭಿ, ಪಡಾಯ್ ಭಿ ಯೋಜನೆಯಡಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಯಾವುದೇ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡು ಅರ್ಹ ಲಾನುಭವಿಗಳಿಗೆ ತಲುಪಬೇಕಾದರೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ ಎಂದರು.
ಸಿಡಿಪಿಒ ವೀರಭದ್ರಯ್ಯ ಮಾಜಿಗೌಡ್ರ ಮಾತನಾಡಿ, ಅಂಗನವಾಡಿ ಮಕ್ಕಳ ಆರೋಗ್ಯ ಮತ್ತು ಸ್ವಚ್ಛತೆ, ನೈರ್ಮಲ್ಯ, ಸಾಮಾಜಿಕ, ಶಿಕ್ಷಣಕ್ಕೆ ಆದ್ಯತೆ ನೀಡುವುದೇ ತರಬೇತಿಯ ಮುಖ್ಯ ಉದ್ದೇಶ. ತಾಲೂಕಿನ 137 ಅಂಗನವಾಡಿ ಕಾರ್ಯಕರ್ತೆಯರಿಗೆ ಈ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ನೀಡುವ ಮಾರ್ಗದರ್ಶನ, ಸೂಚನೆಗಳನ್ನು ಪಾಲಿಸಿಕೊಂಡು ಅಂಗನವಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನಾಥ್ ಪೌಷ್ಟಿಕ ಆಹಾರದ ತರಬೇತಿ ನೀಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದರು. ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ಕರ್ ಮಾತನಾಡಿ, ಎರಡು ವಾರಕ್ಕಿಂತ ಅಧಿಕ ಸಮಯ ಕೆಮ್ಮು ಇರುವುದು, ಮಧ್ಯಾಹ್ನ ಅಥವಾ ಸಂಜೆ ಜ್ವರ ಕಾಣಿಸಿಕೊಳ್ಳುವುದು, ಕದಲ್ಲಿ ರಕ್ತ ಬೀಳುವುದು, ಎದೆನೋವು, ತೂಕ ಕಡಿಮೆ ಆಗುವುದು ಕ್ಷಯದ ಲಕ್ಷಣ. ಈ ಲಕ್ಷಣಗಳು ಕಂಡುಬಂದ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. ಎಕ್ಸರೇ, ಕ ಪರೀಕ್ಷೆ ಮಾಡಿಸಿದಾಗ ಕ್ಷಯ ರೋಗ ಸಾಬೀತಾದರೆ 6 ತಿಂಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಪೋಷಣ್ ಅಭಿಯಾನದಡಿ ಅಂಥವರಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
 ಸಿಡಿಪಿಒ ಇಲಾಖೆ ಸಂಪನ್ಮೂಲ ವ್ಯಕ್ತಿಗಳಾದ ನಳಿನಾಕ್ಷಿ, ಸಾವಿತ್ರಮ್ಮ, ಕಾವ್ಯಶ್ರೀ, ತಾಲೂಕು ಎನ್‌ಆರ್‌ಎಲ್‌ಎಂ ಯೋಜನೆ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ, ಪೋಷಣ್ ಅಭಿಯಾನ ಸಂಯೋಜಕ ಪ್ರದೀಪ್, ಅಲ್ಪಸಂಖ್ಯಾತರ ಇಲಾಖೆಯ ನವಾಜ್ ಹಾಗೂ 107 ಅಂಗನವಾಡಿಗಳ ಕಾರ್ಯಕರ್ತೆಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net