ಯುವಪೀಳಿಗೆಯ ಆರೋಗ್ಯ ಮೇಲೆ ಪರಿಣಾಮ

ಕಡೂರಿನ ತಂಗಲಿ ಕೆರೆ ಬಳಿ ಪ್ರಜ್ಞಾ ಸೆಂಟ್ರಲ್ ಶಾಲೆ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಕಷಿ ವಿಜ್ಞಾನಿ ಬಿಸಲೇಹಳ್ಳಿ ನಟರಾಜ್ ಜಾಗತಿ ಮೂಡಿಸಿದರು. ಎನ್.ಪಿ.ಮಂಜುನಾಥಪ್ರಸನ್ನ ಇತರರಿದ್ದರು.
ಕಡೂರಿನ ತಂಗಲಿ ಕೆರೆ ಬಳಿ ಪ್ರಜ್ಞಾ ಸೆಂಟ್ರಲ್ ಶಾಲೆ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಕಷಿ ವಿಜ್ಞಾನಿ ಬಿಸಲೇಹಳ್ಳಿ ನಟರಾಜ್ ಜಾಗತಿ ಮೂಡಿಸಿದರು. ಎನ್.ಪಿ.ಮಂಜುನಾಥಪ್ರಸನ್ನ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಿದೆ.
  • ಮಣ್ಣಿನ ಲವತ್ತತೆ ಹೆಚ್ಚಿಸುವುದು,
ಕಡೂರು: ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಪ್ರಾಮುಖ್ಯತೆ ನೀಡಿದಾಗ ಮಾತ್ರ ಮುಂದಿನ ಪೀಳಿಗೆ ಆರೋಗ್ಯಕರವಾಗಿರಲು ಸಾಧ್ಯ ಎಂದು ಕೃಷಿ ವಿಜ್ಞಾನಿ ಬಿಸಲೇಹಳ್ಳಿ ನಟರಾಜ್ ತಿಳಿಸಿದರು.
ತಂಗಲಿ ಕೆರೆಯ ದಡದಲ್ಲಿ ಪ್ರಜ್ಞಾಸೆಂಟ್ರಲ್ ಶಾಲೆ ಮಕ್ಕಳಿಗೆ ಪರಿಸರ ಜಾಗತಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ,  ಕೈಗಾರಿಕೆಯ ತ್ಯಾಜ್ಯ, ಬದಲಾದ ನಮ್ಮ ಜೀವನ ಶೈಲಿಯಿಂದ ಪರಿಸರ ಹಾಳಾಗಿದೆ. ಹಾಗಾಗಿ ಪರಿಸರ ಜಾಗತಿ ಬೇಕಾಗಿದೆ. ಶಾಲಾ ಹಂತದಲ್ಲೇ ಇವುಗಳ ಬಗ್ಗೆ ಅರಿವು ಮೂಡಿಸಬೇಕು. ನೀರಿನ ಮಿತ ಬಳಕೆ, ಮಳೆ ನೀರು ಕೊಯ್ಲನ್ನು ಮಾಡಿ ಮರು ಬಳಕೆ ಮಾಡುವುದು ಮುಖ್ಯ ಎಂದರು. 
ವೈಜ್ಞಾನಿಕವಾಗಿ ಮಣ್ಣಿನ ಲವತ್ತತೆ ಹೆಚ್ಚಿಸುವುದು, ಮನೆಗಳಲ್ಲಿ ಕೈತೋಟಗಳನ್ನು ನಿರ್ಮಿಸಿ ತರಕಾರಿ ಬೆಳೆಯಬೇಕು. ಪ್ಲಾಸ್ಟಿಕ್ ಬಳಕೆ  ಕಡಿಮೆ ಮಾಡಬೇಕಿದೆ. ಮರ, ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೂ ಕೈಜೋಡಿಸಬೇಕು ಎಂದರು. 
ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಎನ್.ಪಿ.ಮಂಜುನಾಥಪ್ರಸನ್ನ ಮಾತನಾಡಿ, ವಿದ್ಯಾರ್ಥಿಗಳು ಮನೆಗಳ ಅಕ್ಕಪಕ್ಕ ಸ್ವಚ್ಛತೆ ಕಾಪಾಡಬೇಕು ಎಂದರು. 
ವಿದ್ಯಾರ್ಥಿಗಳನ್ನು ತಂಗಲಿ ಕೆರೆ ಕೋಡಿ ಬಳಿ ಕರೆದೊಯ್ದು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಶುದ್ಧ ನೀರು, ಪರಿಸರ ಸಂರಕ್ಷಣೆ, ಸ್ವಚ್ಛ  ಪರಿಸರ ನಿರ್ಮಾಣ, ನೀರಿನ ಮರು ಬಳಕೆ, ತ್ಯಾಜ್ಯ ವಸ್ತುಗಳ ಮರು ಬಳಕೆ ವಿಧಾನ, ವಿಲೇವಾರಿ ಆಗದ ವಸ್ತುಗಳ ನಿರ್ವಹಣೆ ಮತ್ತಿತರ ವಿಷಯಗಳ ಕುರಿತು ತಜ್ಞರಿಂದ ತಿಳಿಸಿಕೊಡಲಾಯಿತು.  
   ಎಲ್ಲರೂ ಸ್ವಯಂಪ್ರೇರಿತರಾಗಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ದೀಕ್ಷಾ ಶಾಲೆ ಪ್ರಾಂಶುಪಾಲ ನವೀನ್ ಡಿ. ಅಲ್ಮೇಡಾ ತಿಳಿಸಿದರು. ಕಡೂರಿನ ದೀಕ್ಷಾ ಶಾಲೆ ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕಿದೆ. ಮಾನವ ವಿಜ್ಞಾನ ಮತ್ತು ತಂತ್ರ ಜ್ಞಾನದಲ್ಲಿ ಎಷ್ಟೇ ಬೆಳೆದಿದ್ದರೂ ಪ್ರಕತಿ ಮುಂದೆ ಅಸಹಾಯಕನಾಗುತ್ತಾನೆ. ಈ ನಿಟ್ಟಿನಲ್ಲಿ ಪರಿಸರವನ್ನು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡಲಿದೆ ಎಂದರು. ಉಪಪ್ರಾಂಶುಪಾಲೇ ಲ್ಯಾನ್ಸಿ ಡಿಸೋಜಾ, ಶಿಕ್ಷಣ ಸಂಯೋಜಕ ವೈ.ಎನ್.ನವೀನ್‌ಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net