ಹಲಸಿನಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ

ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಹಲಸು, ಸ್ವದೇಶಿ ಮೇಳವನ್ನು ಸುನೀತಾ ಉದ್ಘಾಟಿಸಿದರು. ರಾಜಗೋಪಾಲ್ ಜೋಷಿ, ಎ.ಎಸ್.ನಯನಾ, ಸಚಿನ್, ಗಣೇಶ್, ಡಾ. ಊರಾಳ್ ಇತರರಿದ್ದರು.
ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಹಲಸು, ಸ್ವದೇಶಿ ಮೇಳವನ್ನು ಸುನೀತಾ ಉದ್ಘಾಟಿಸಿದರು. ರಾಜಗೋಪಾಲ್ ಜೋಷಿ, ಎ.ಎಸ್.ನಯನಾ, ಸಚಿನ್, ಗಣೇಶ್, ಡಾ. ಊರಾಳ್ ಇತರರಿದ್ದರು.
Published on
 ಶೃಂಗೇರಿ: ಹಲಸು ಮಲೆನಾಡಿನಲ್ಲಿ ವಿಪುಲವಾಗಿ ಬೆಳೆಯುವ ಹಣ್ಣು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಹೊರನಾಡಿನ ಜಿಲ್ಲಾ ರೋಟರಿ ಸಂಸ್ಥೆ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ್ ಜೋಷಿ ಹೇಳಿದರು.
 ಜೆಸಿಬಿಎಂ ಕಾಲೇಜಿನಲ್ಲಿ ಶನಿವಾರ ಇನ್‌ೊ ನ್ಯೂಸ್, ನಾಟ್ಯವೈಭವ ನೃತ್ಯ ಅಕಾಡೆಮಿ ಹಾಗೂ ಕುಂದಾಪುರ ಬೆನಕ ಇವೆಂಟ್ಸ್ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ಹಲಸು, ಸ್ವದೇಶಿ ಮೇಳ ಉದ್ಘಾಟಿಸಿ ಮಾತನಾಡಿದರು.
ಹಿರಿಯರು ಹಲಸಿನಹಣ್ಣನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುತ್ತಿದ್ದರು. ಈ ಹಣ್ಣಿನಲ್ಲಿ ಜೌಷಧೀಯ ಗುಣಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಹಲಸಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಾಗಿದ್ದು ದೇಹಕ್ಕೆ ಶಕ್ತಿ ನೀಡುತ್ತದೆ. ಮಲೆನಾಡಿನ ಸುತ್ತಮುತ್ತ ಇರುವ ಹಣ್ಣುಗಳ ಕುರಿತು ಜ್ಞಾನವನ್ನು ಮೂಡಿಸಲು ಆಯೋಜಕರು ಮೂರು ದಿನಗಳ ಕಾಲ ಹಲಸಿನ ಮೇಳ ಆಯೋಜಿಸಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಮೇಳದಲ್ಲಿ ಪುಸ್ತಕ ಮಾರಾಟ, ಗಿಡಗಳು, ಉತ್ತರಭಾರತದ ಆಹಾರಗಳು, ಚನ್ನಪಟ್ಟಣದ ಬೊಂಬೆಗಳು, ಇಳಕಲ್ ಸೀರೆಗಳ ಖರೀದಿಗೆ ಅವಕಾಶವಿದೆ ಎಂದರು.
ಆಯೋಜಕ ಜಿ.ಎಲ್.ಸಚಿನ್ ಮಾತನಾಡಿ, ಸ್ವಯಂ ಉದ್ಯೋಗಕ್ಕೆ ಮಲೆನಾಡಿನಲ್ಲಿ ವಿಪುಲವಾದ ಅವಕಾಶವಿದೆ. ಹಲಸು ಸುಲಭವಾಗಿ ಬೆಳೆಯುವ ಬೆಳೆಯಾಗಿದ್ದು ಯುವಜನರು ಹಲಸಿನಹಣ್ಣಿನಿಂದ ಖ್ಯಾದಗಳನ್ನು ತಯಾರಿಸುವ ಪ್ರಕ್ರಿಯೆಗೆ ಮುಂದಾಗಬೇಕಿದೆ.  ಮಾರುಕಟ್ಟೆಯಲ್ಲಿ ಈ ಖ್ಯಾದಗಳಿಗೆ ಹೆಚ್ಚು ಬೇಡಿಕೆ ಇದೆ ಎಂದರು.
 ಹಲಸಿನ ಹಣ್ಣಿನಲ್ಲಿ ಹಲವಾರು ಜಾತಿಗಳಿದ್ದು ಅವುಗಳಲ್ಲಿ ಹೇರಳವಾದ ವಿಟಮಿನ್‌ಗಳು ಇವೆ. ಇಂಥ ಮೇಳಗಳು ಪ್ರತಿವರ್ಷ ಆಯೋಜಿಸಿದಾಗ ಮಾತ್ರ ಹಣ್ಣಿನ ಮಹತ್ವದ ಜನರಿಗೆ ತಿಳಿಯಲು ಸಾಧ್ಯ ಎಂದರು.
ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ, ಡಾ. ವಾಸುದೇವ ಉರಾಳ್, ರೋಟರಿ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ, ಆಯೋಜಕರಾದ ಗಣೇಶ್, ಭಾಸ್ಕರ್ ಪೂಜಾರಿ, ಸುನೀತಾ ನವೀನ್ ಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net