ಮಲೆನಾಡಿನ ಮನೆಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ

ಬಾಳೆಹೊನ್ನೂರಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಬಾಳೆಹೊನ್ನೂರಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
Published on
ಬಾಳೆಹೊನ್ನೂರು: ಇಂದಿನ ಮಕ್ಕಳಿಗೆ ಪಾಲಕರು ಸಂಸ್ಕಾರ ಕಲಿಸದಿರುವುದರಿಂದ ಮಲೆನಾಡಿನ ಮನೆಗಳು ವೃದ್ಧಾಶ್ರಮವಾಗಿ ಪರಿವರ್ತನೆಯಾಗುತ್ತಿವೆ ಎಂದು ಉಪನ್ಯಾಸಕಿ ಡಿ.ಬಿ.ಸವಿತಾ ರಮೇಶ್ ಹೇಳಿದರು.
ಭೈರವಿ ಮಹಿಳಾ ಒಕ್ಕಲಿಗರ ಸಂಘ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಇಲ್ಲದೆ ಯಾವುದೇ ಸಂಸಾರವಿಲ್ಲ ಎಂಬುದು ನಮ್ಮ ಅರಿವಿನಲ್ಲಿ ಇರಬೇಕು. ಹಿಂದೆ ಮಹಿಳೆಯರಿಗೆ ಸಾಕಷ್ಟು ಜವಾಬ್ದಾರಿಗಳಿದ್ದವು. ಸಂಸಾರವನ್ನು ಕಷ್ಟದಿಂದ ನಿಭಾಯಿಸುತ್ತಿದ್ದಳು. ಆದರೆ ಇಂದು ಕೆಲ ಮಹಿಳೆಯರು ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಇಂದು ಹೊಂದಾಣಿಕೆ ಮರೆಯಾಗಿ ವ್ಯಕ್ತಿಯನ್ನು ವ್ಯಕ್ತಿತ್ವದ ಮೂಲಕ ಗುರುತಿಸದೆ ಅಂತಸ್ತಿನ ಮೂಲಕ ಅಳೆಯಲಾಗುತ್ತಿದೆ ಎಂದರು.
ಹಿಂದೆ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆರ್ಥಿಕತೆ ನಿರಾಕರಿಸಿ ದಾಸ್ಯದಲ್ಲಿ ಇರಿಸಲಾಗುತ್ತಿತ್ತು. ಆದರೆ ಇಂದು ಹೋರಾಟದ ಲವಾಗಿ, ಸಂವಿಧಾನದಿಂದ ಸಮಾನ ಹಕ್ಕು ದೊರೆತಿದೆ. ಮದುವೆಯಾದ ಹೆಣ್ಣು ಮಕ್ಕಳಿಗೂ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಸ್ವಲ್ಪ ಭಾಗ ನೀಡಬೇಕು. ಇದು ಆ ಕುಟುಂಬದ ನಿಜವಾದ ಕರ್ತವ್ಯ ಎಂದರು.
ಕರಕುಶಲ ಕೌಶಲ ಹೊಂದಿರುವ ರತ್ನಮ್ಮ ದುಗ್ಗಪ್ಪ ಗೌಡ ಕೇಶವತ್ತಿ, ನಾಟಿ ವೈದ್ಯೆ ಪವಿತ್ರಾ ಭಗವಾನ್ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭೈರವಿ ಒಕ್ಕಲಿಗರ ಸಂಘದ ಅಧ್ಯಕ್ಷೆ ಸಿ.ಟಿ.ರೇವತಿ ಧರ್ಮರಾಜ್, ಕಾರ್ಯದರ್ಶಿ ಪ್ರೀತಿ ಉಮೇಶ್, ಖಜಾಂಚಿ ಜ್ಯೋತಿ ಜಗದೀಶ್, ನಿರ್ದೇಶಕರಾದ ಸುಪ್ರಿಯಾ, ಶಮಂತಾ, ಕರುಣಾ, ರೇಖಾ, ಮೈತ್ರಿ, ಆಶಾ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net