ಶೃಂಗೇರಿ ಟಿಎಪಿಸಿಎಂಎಸ್‌ಗೆ ಎಚ್.ಕೆ.ನವೀನ್ ಅಧ್ಯಕ್ಷ

ಶೃಂಗೇರಿ ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಕೆ.ನವೀನ್ ಮತ್ತು ಉಪಾಧ್ಯಕ್ಷ ಪುರುಷೋತ್ತಮ್ ಹೆಗ್ಡೆ  ಅವರನ್ನು ಸದಸ್ಯರು ಅಭಿನಂದಿಸಿದರು.
ಶೃಂಗೇರಿ ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಕೆ.ನವೀನ್ ಮತ್ತು ಉಪಾಧ್ಯಕ್ಷ ಪುರುಷೋತ್ತಮ್ ಹೆಗ್ಡೆ ಅವರನ್ನು ಸದಸ್ಯರು ಅಭಿನಂದಿಸಿದರು.
Published on
ಶೃಂಗೇರಿ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಕೆ.ನವೀನ್, ಉಪಾಧ್ಯಕ್ಷರಾಗಿ ಪುರುಷೋತ್ತಮ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಹಸೀಲ್ದಾರ್ ಅನೂಪ್ ಸಂಜೋಗ್ ಚಯಾಗಿ ಕಾರ್ಯನಿರ್ವಹಿಸಿದ್ದರು.
ನೂತನ ಅಧ್ಯಕ್ಷ ಎಚ್.ಕೆ.ನವೀನ್ ಮಾತನಾಡಿ, ರೈತರಿಗೆ ಅನುಕೂಲ ಮಾಡಿಕೊಡಲು ಸಂಘವನ್ನು ಇನ್ನಷ್ಟು ಸದೃಢಗೊಳಿಸಲಾಗುವುದು.ಲಭ್ಯವಿರುವ ರಸಗೊಬ್ಬರ ಮತ್ತಿತರ ಕೃಷಿ ಉಪಕರಣವನ್ನು ಸಕಾಲಕ್ಕೆ ಒದಗಿಸಲಾಗುತ್ತದೆ. ರೈತರ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಹಕಾರಿ ಬಂಧುಗಳ ಸಹಕಾರ ಅಗತ್ಯ ಎಂದರು.
ಬಿಜೆಪಿ ಮುಖಂಡರಾದ ತಲಗಾರು ಉಮೇಶ್, ಕೆ.ಎಂ.ಶ್ರೀನಿವಾಸ್, ಚೇತನ್ ಹೆಗ್ಡೆ, ಕೆ.ಎಸ್.ರಮೇಶ್,ಪ್ರದೀಪ್, ಜಿ.ಜಿ.ಮಂಜುನಾಥ್, ಪ್ರಕಾಶ್, ಪ್ರವೀಣ್, ಅಜಿತ್, ಸುಭಾಷ್, ನೂತನ ಕುಮಾರ್, ಮಾಗೋಡು ಮಂಜುನಾಥ್, ರಾಘವೇಂದ್ರ, ದೇವೇಂದ್ರ, ನಟೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net