ಕತ್ತಲು ಕಳೆದ ಹೈಮಾಸ್ಟ್ ದೀಪಗಳು

ಕಳಸ ಕಲಶೇಶ್ವರ ದೇವಸ್ಥಾನ ಸಮೀಪ ಅಳವಡಿಸಿರುವ ಹೈಮಾಸ್ಟ್ ದೀಪ.
ಕಳಸ ಕಲಶೇಶ್ವರ ದೇವಸ್ಥಾನ ಸಮೀಪ ಅಳವಡಿಸಿರುವ ಹೈಮಾಸ್ಟ್ ದೀಪ.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಅನುದಾನದಡಿ
  • 40 ಲಕ್ಷ ರೂ. ವೆಚ್ಚ
ಕಳಸ: ತಾಲೂಕಿನ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಧುನಿಕ ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವ ಮಹತ್ವದ ಕಾರ್ಯ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ, ಶಾಸಕಿ ನಯನಾ ಮೋಟಮ್ಮ ಅವರ ಪ್ರಯತ್ನದಿಂದ ತಾಲೂಕಿನಲ್ಲಿ 8 ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಕಾಮಗಾರಿಗೆ 40 ಲಕ್ಷ ರೂ. ವೆಚ್ಚವಾಗಿದ್ದು, ಪ್ರತಿ ಹೈಮಾಸ್ಟ್ ದೀಪಕ್ಕೆ ಸುಮಾರು 5 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಪಟ್ಟಣದ ಕಲಶೇಶ್ವರ ದೇವಸ್ಥಾನ ಸಮೀಪ, ಪೊಲೀಸ್ ಠಾಣೆ ಸಮೀಪ, ಮಂಜಿನಕಟ್ಟೆ, ಮಹಾವೀರ ವತ್ತ, ಸಂಸೆ, ಕುದುರೆಮುಖ, ಹಿರೇಬೈಲು ಹಾಗೂ ಬಾಳೆಹೊಳೆ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಸುಮಾರು 50 ಅಡಿ ಎತ್ತರದ ಕಂಬದಲ್ಲಿ  ಆರು ದೀಪಗಳನ್ನು ಅಳವಡಿಸಲಾಗಿದ್ದು, ವಿಶಾಲ ಪ್ರದೇಶಕ್ಕೆ ಬೆಳಕು ಹರಡುತ್ತಿದೆ.
ಹೈಮಾಸ್ಟ್ ದೀಪಗಳು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹೆಚ್ಚಿನ ಬೆಳಕು ನೀಡುವ ಎಲ್‌ಇಡಿ ತಂತ್ರಜ್ಞಾನ ಹೊಂದಿವೆ. ಧಾರ್ಮಿಕ ಕೇಂದ್ರಗಳು, ಪ್ರಮುಖ ವತ್ತಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 55 ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಕೈಗೊಳ್ಳಲಾಗಿದ್ದು, ಕಳಸ ತಾಲೂಕಿಗೆ ಮೊದಲ ಹಂತದಲ್ಲಿ 8 ದೀಪಗಳು ಮಂಜೂರಾಗಿವೆ. ಕಳಸ ಭಾಗದಲ್ಲಿ ಇನ್ನೂ ಹೆಚ್ಚಿನ ಹೈಮಾಸ್ಟ್ ದೀಪಗಳ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ದೀಪಗಳನ್ನು ಮಂಜೂರು ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವನಾಥ್ ತಿಳಿಸಿದ್ದಾರೆ. ರಾತ್ರಿ ವೇಳೆ ಬೆಳಕಿನ ಕೊರತೆಯಿಂದ ಎದುರಾಗುತ್ತಿದ್ದ ಸಮಸ್ಯೆಗೆ ಹೈಮಾಸ್ಟ್ ದೀಪಗಳು ಪರಿಹಾರವಾಗಿವೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net