ಸ್ವಸ್ಥಸಮಾಜ ನಿರ್ಮಾಣಕ್ಕೆ ಸಹಕಾರಿ

ಕಡೂರು ತಾಲೂಕಿನ ಅಣೇಗೆರೆ ಗ್ರಾಮದಲ್ಲಿ ಹೋಬಳಿ ಮಟ್ಟದ ಜಾನಪದ ಕಲೆಗಳ ಅಪೂರ್ವ ಸಂಗಮ ಕಾರ್ಯಕ್ರಮವನ್ನು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಜಗದೀಶ್ ಆಚಾರ್, ದೇವಾನಂದ್, ಸವಿತಾ ಮತ್ತಿತರರಿದ್ದರು.
ಕಡೂರು ತಾಲೂಕಿನ ಅಣೇಗೆರೆ ಗ್ರಾಮದಲ್ಲಿ ಹೋಬಳಿ ಮಟ್ಟದ ಜಾನಪದ ಕಲೆಗಳ ಅಪೂರ್ವ ಸಂಗಮ ಕಾರ್ಯಕ್ರಮವನ್ನು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಜಗದೀಶ್ ಆಚಾರ್, ದೇವಾನಂದ್, ಸವಿತಾ ಮತ್ತಿತರರಿದ್ದರು.
Published on
ಕಡೂರು: ಜನಪದ ಕಲೆಗಳು ಮನುಷ್ಯನ ವ್ಯಕ್ತಿತ್ವ ವಿಕಾಸಗೊಳಿಸುವುದಲ್ಲದೆ ನಾಗರಿಕತೆಯನ್ನು ಕಲಿಸುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಅಣೇಗೆರೆ ಗ್ರಾಮದ ಶ್ರೀ ಕೋಡಿಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಏರ್ಪಡಿಸಿದ್ದ ಪಂಚನಹಳ್ಳಿ ಹೋಬಳಿ ಮಟ್ಟದ ಜಾನಪದ ಕಲೆಗಳ ಅಪೂರ್ವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದವು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದಲ್ಲದೆ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿಕರಿಂದ ಮತ್ತು ಮಹಿಳೆಯರಿಂದ ಜಾನಪದ ಕಲೆ, ಸಾಹಿತ್ಯ, ಸಂಗೀತ ಸದೃಢವಾಗಿ ಬೆಳೆದು ಬಂದಿವೆ. ಇಂದಿನ ಯುವಪೀಳಿಗೆಗೆ ಅವುಗಳನ್ನು ಪೋಷಿಸಿ ಮುಂದಿನ ತಲೆಮಾರಿಗೆ ಬೆಳೆಸಲು ಆದ್ಯತೆ ನೀಡಬೇಕಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯರದಕೆರೆ ರಾಜಪ್ಪ ಮಾತನಾಡಿ, ಜಾನಪದ ಕಲೆ, ಸಾಹಿತ್ಯ, ಸಂಗೀತವನ್ನು ತಳಮಟ್ಟದಲ್ಲಿ ಸಂಘಟಿಸಲು ಜಾನಪದ ಪರಿಷತ್ ಘಟಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಜಾನಪದಕ್ಕೆ ಜಾತಿ ಕಟ್ಟು ಪಾಡುಗಳಿಲ್ಲ. ಇದಕ್ಕೆ ಸಮಾಜವನ್ನು ಒಟ್ಟುಗೂಡಿಸುವ ಶಕ್ತಿ ಇದೆ ಎಂದರು.
ಪರಿಷತ್ ತಾಲೂಕು ಅಧ್ಯಕ್ಷ ಜಗದೀಶ್ ಆಚಾರ್, ಹಿರಿಯ ಜಾನಪದ ಕಲಾವಿದರಾದ ರಂಗನಾಥ, ಶ್ರೀನಿವಾಸ, ಸೌಭಾಗ್ಯಾ, ಮಂಜಮ್ಮ ಅವರನ್ನು  ಸನ್ಮಾನಿಸಲಾಯಿತು. ಬಿ.ಪಿ.ದೇವಾನಂದ್, ಪಿ.ಎನ್.ಓಂಕಾರಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷೆ ಸವಿತಾ, ಭಜನಾ ಮಂಡಳಿ ಅಧ್ಯಕ್ಷ ಚಂದ್ರಪ್ಪ, ಕಲಾವಿದ ಪಂಚನಹಳ್ಳಿ ಲೋಕೇಶ್, ಸುಜಾತಾ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ಪಂಚನಹಳ್ಳಿ ಹೋಬಳಿ ಅಧ್ಯಕ್ಷ ಜಯಸ್ವಾಮಿ, ಮಂಜುನಾಥ, ನಿಡುವಳ್ಳಿ ಶ್ರೀನಿವಾಸ, ರಾಮಚಂದ್ರ, ಯಲ್ಲಪ್ಪ, ಓಬಳೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net