ಆರೋಗ್ಯ ಅಮೂಲ್ಯ ಸಂಪತ್ತು (health)

ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ವೃದ್ಧಾಶ್ರಮದಲ್ಲಿ ಆಸ್ಪತ್ರೆಯಿಂದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ. ಪ್ರವೀಣ್, ಕಿರಣ್, ಡಾ. ಅನುಪಮಾ ಇದ್ದರು.
ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ವೃದ್ಧಾಶ್ರಮದಲ್ಲಿ ಆಸ್ಪತ್ರೆಯಿಂದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ. ಪ್ರವೀಣ್, ಕಿರಣ್, ಡಾ. ಅನುಪಮಾ ಇದ್ದರು.
Published on
ಶೃಂಗೇರಿ: ಮಾನವನ ನಿಜವಾದ ಸಂಪತ್ತು ಆರೋಗ್ಯ. ಹಿರಿಯ ನಾಗರಿಕರ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಸಹಜ ಪ್ರಕ್ರಿಯೆ. ಹಾಗಾಗಿ ಅವರು ಕಾಲಕಾಲಕ್ಕೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಪ್ರವೀಣ್ ತಿಳಿಸಿದರು.
 ವಿದ್ಯಾರಣ್ಯಪುರ ವೃದ್ಧಾಶ್ರಮದಲ್ಲಿ ಆಸ್ಪತ್ರೆಯಿಂದ ಆಯೋಜಿಸಿದ್ದ ಉಚಿತ ಮೊಬೈಲ್ ಆರೋಗ್ಯ ಸೇವೆ ಕಾರ್ಯಕ್ರಮದಲ್ಲಿ  ಮಾತನಾಡಿದರು. ದೇಹ ಹಾಗೂ ಮನಸ್ಸು ಸಂಪೂರ್ಣ ಸಮತೋಲನದಲ್ಲಿ ಇರಬೇಕಾದರೆ ಆರೋಗ್ಯ ಸಂರಕ್ಷಣೆ ಅವಶ್ಯಕ. ಈ ನಿಟ್ಟಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭಾಗವಾದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮೊಬೈಲ್ ಆಸ್ಪತ್ರೆ ಶೃಂಗೇರಿ ಕ್ಷೇತ್ರದ ನಾನಾ ಭಾಗಗಳಿಗೆ ತೆರಳಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತ ಬಂದಿದೆ. ಮೊಬೈಲ್ ಆಸ್ಪತ್ರೆಯ ಸೇವೆಯನ್ನು ಸರ್ವರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 200ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ. ರೇಣುಕಾರಾಧ್ಯ, ವೃದ್ಧಾಶ್ರಮದ ಉಸ್ತುವಾರಿ ಅಧಿಕಾರಿ  ಮೋಹನ್ ರಾವ್, ಡಾ. ಅನುಪಮಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net