ಆಲ್ದೂರು: ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸುಗ್ಗಿ ಹಬ್ಬಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಗ್ರಾಮಗಳಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ, ಚಿಕ್ಕಮಾಗರವಳ್ಳಿ, ಹಳಿಯೂರು, ದೊಣಗುಡಿಗೆ, ಹಳೆ ಆಲ್ದೂರು, ಹೊಸಳ್ಳಿ, ತುಡಕೂರು, ಕೆಳಗೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಬೆಳಗ್ಗೆ ಗ್ರಾಮದ ದೇವಿರಮ್ಮನ ದೇವಸ್ಥಾನದಲ್ಲಿ ದೇವಿರಮ್ಮನ ಉತ್ಸವ ಮೂರ್ತಿಯನ್ನು ಉಯಿಲು ಸರಪಳಿಯಲ್ಲಿ ಇಟ್ಟು ತೂಗುವ ಮೂಲಕ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಲಾಯಿತು.