ಸಿಎಂಸಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಕ್ಕಳ ಹಕ್ಕುಗಳಲ್ಲಿ ಒಂದಾದ ಭಾಗವಹಿಸುವಿಕೆಯ ಹಕ್ಕನ್ನು ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಮಕ್ಕಳ ಮೂಲಸೌಕರ್ಯ, ರಕ್ಷಣೆಯ ಕುರಿತ ವಿಚಾರಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಸಭೆ ನಡೆಸಲಾಗುತ್ತಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಮುಖ್ಯಶಿಕ್ಷಕ ಧರಣೇಶ್, ಮುಖಂಡರಾದ ವೆಂಕಟೇಶ್, ರಾಜು, ಲೋಕೇಶ್, ರೂಪಾ, ಮಹೇಶ್, ಚಂದನ್, ಆರಾಧ್ಯ, ವಕೀಲರಾದ ಚಂದ್ರಶೇಖರ್, ಕೀರ್ತಿಕೃಷ್ಣ ಹಾಗೂ ಮರಡಿಹಳ್ಳಿ, ಭೋವಿಕಾಲನಿ, ಕುರುಬಗೆರೆ, ಎನ್.ಜಿ.ಕೊಪ್ಪಲು ಗ್ರಾಮದ ಮಕ್ಕಳು ಸಭೆಯಲ್ಲಿ ಭಾಗವಹಿಸಿದ್ದರು.