ಸನಾತನ ಧರ್ಮದಿಂದ ಶ್ರೇಯಸ್ಸು

ಶೃಂಗೇರಿ ತಾಲೂಕಿನ ನೇತ್ರವಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುವರ್ಣಭಾರತಿ ಯೋಜನೆಯಡಿ ನಿರ್ಮಾಣಗೊಂಡ ಶ್ರೀ ದುರ್ಗಾಪ್ರಸಾದ ಭೋಜನಾಲಯವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.
ಶೃಂಗೇರಿ ತಾಲೂಕಿನ ನೇತ್ರವಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುವರ್ಣಭಾರತಿ ಯೋಜನೆಯಡಿ ನಿರ್ಮಾಣಗೊಂಡ ಶ್ರೀ ದುರ್ಗಾಪ್ರಸಾದ ಭೋಜನಾಲಯವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.
Published on
ಶೃಂಗೇರಿ: ಸನಾತನ ಧರ್ಮದ ಪರಂಪರೆ ಉತ್ಕೃಷ್ಟವಾದುದು. ಧರ್ಮ ಪರಂಪರೆ ಶ್ರೇಷ್ಠವಾದುದು ಎಂಬುದು ಯಾರೊಬ್ಬರ ಕಲ್ಪನೆಯಲ್ಲ. ಅದು ಪಾರಂಪರಿಕವಾಗಿ ಬಂದಂತಹ ಅನನ್ಯ ಮೌಲ್ಯ ಎಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು. 
ತಾಲೂಕಿನ ನೇತ್ರವಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುವರ್ಣಭಾರತೀ ಯೋಜನೆಯಡಿ ನಿರ್ಮಾಣಗೊಂಡ ಶ್ರೀ ದುರ್ಗಾಪ್ರಸಾದ ಭೋಜನಾಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.  
ಭವನಕ್ಕೆ ಆಧಾರಸ್ತಂಭ ಇರುವುದು ಸತ್ಯವಾದ ವಿಚಾರ. ಹಾಗೆಯೇ ಸನಾತನ ಧರ್ಮ ಎಂಬುದು ವಾಸ್ತವಿಕ ವಿಚಾರ. ಪ್ರಪಂಚಕ್ಕೆ ಆಧಾರವಾಗಿ ಇರುವುದು ನಮ್ಮ ಶ್ರೇಷ್ಠವಾದ ಧರ್ಮ. ಸನಾತನ ಧರ್ಮದಿಂದ ನಮಗೆ ಶ್ರೇಯಸ್ಸು ಸಿಗುತ್ತದೆ. ಲೋಕದಲ್ಲಿ ಜೀವನಕ್ಕೆ ಉದ್ಯೋಗ ಆಧಾರವಾಗಿದೆ. ಮಕ್ಕಳಿಗೆ ಪಾಲಕರು ಆಧಾರ. ಪಾಲಕರಿಗೆ ಮಕ್ಕಳು ಆಧಾರ. ಜಗತ್ತಿನಲ್ಲಿ ಸರ್ವರಿಗೂ ಬೇಕಾಗಿರುವುದು ಶ್ರೇಯಸ್ಸು. ಅದು ನಮಗೆ ಧರ್ಮದಿಂದ ಮಾತ್ರ ಲಭಿಸುತ್ತದೆ ಎಂದರು.
ಲೋಕದಲ್ಲಿ ಹಲವಾರು ಮತಗಳು ಹಾಗೂ ಪಂಥಗಳಿವೆ. ಧರ್ಮಕ್ಕೂ ಮತಕ್ಕೂ ವ್ಯತ್ಯಾಸವಿದೆ. ಯಾರು ಬೇಕಾದರೂ ಹೊಸ ಮತಗಳನ್ನು ಹುಟ್ಟುಹಾಕಬಹುದು. ಆದರೆ ಧರ್ಮ ಎಂಬುದು ವಸ್ತುನಿಷ್ಠವಾದ ಮೌಲ್ಯ ಎಂದು ತಿಳಿಸಿದರು.
ಸಭೆಗೆ ಮುನ್ನ ಚಂಡಿಕಾ ಹೋಮದ ಪೂರ್ಣಾಹುತಿಯಲ್ಲಿ ಜಗದ್ಗುರುಗಳು ಭಾಗವಹಿಸಿದ್ದರು. ಆಡಳಿತಾಧಿಕಾರಿ ಪಿ.ಎ.ಮುರಳಿ, ಹಿರಿಯ ಆರ್ಚಕ ರಾಮಕೃಷ್ಣಯ್ಯ ಉಪಸ್ಥಿತರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net