ಪ್ರಕೃತಿ ಜತೆ ಜಾನಪದ ಸಂಸ್ಕೃತಿ ಬೆಸುಗೆ

ಕಳಸ ತಾಲೂಕು ಕನ್ನಡ ಜಾನಪದ ಪರಿಷತ್‌ನಿಂದ ಗಿಡ ನೆಟ್ಟು ಪರಿಸರ ದಿನ ಆಚರಿಸಲಾಯಿತು. ವಿನಾಯಕ, ಭರತ್‌ರಾಜ್,  ಮಂಜುಳಾ, ಕಲ್ಪನಾ, ಪ್ರೇಮ್‌ಕುಮಾರ್, ಸುಜಯಾ ಇತರರಿದ್ದರು.
ಕಳಸ ತಾಲೂಕು ಕನ್ನಡ ಜಾನಪದ ಪರಿಷತ್‌ನಿಂದ ಗಿಡ ನೆಟ್ಟು ಪರಿಸರ ದಿನ ಆಚರಿಸಲಾಯಿತು. ವಿನಾಯಕ, ಭರತ್‌ರಾಜ್, ಮಂಜುಳಾ, ಕಲ್ಪನಾ, ಪ್ರೇಮ್‌ಕುಮಾರ್, ಸುಜಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ಪೀಳಿಗೆಗೆ ಹಾಗೂ ಪಕ್ಷಿ ಸಂಕುಲಕ್ಕೆ ಆಸರೆಯಾಗುವಂಥ
  • ತಾಯಿ ಇಡೀ ಸಂಸಾರವನ್ನು ಪೋಷಿಸುವಂತೆ,
ಕಳಸ: ಭಾಷೆ, ಕಲೆಯಷ್ಟೇ ಪ್ರಕೃತಿಯನ್ನೂ ಉಳಿಸುವುದು ಜಾನಪದ ಪರಿಷತ್ತಿನ ಮುಖ್ಯ ಆಶಯ. ಈ ನಿಟ್ಟಿನಲ್ಲಿ ಜಾನಪದ ಪರಿಸರ ದಿನಾಚರಣೆಗೆ ಪರಿಷತ್ತಿನ ಕೊಡುಗೆಯಾಗಿ ಮುಂದಿನ ಪೀಳಿಗೆಗೆ ಹಾಗೂ ಪಕ್ಷಿ ಸಂಕುಲಕ್ಕೆ ಆಸರೆಯಾಗುವಂಥ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಡುತ್ತಿದ್ದೇವೆ ಎಂದು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್ ಹೇಳಿದರು.
ತಾಲೂಕು ಕನ್ನಡ ಜಾನಪದ ಪರಿಷತ್‌ನಿಂದ ಮಂಗಳವಾರ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಮಾತನಾಡಿ, ಜಾನಪದ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧವಿದೆ. ಜಾನಪದ ಸಂಸ್ಕೃತಿ ಪ್ರಕೃತಿಯ ಆರಾಧನೆಯಿಂದಲೇ ಮೈದಳೆದಿದೆ. ಗಿಡ, ಮರ, ಕಲ್ಲು, ಬಂಡೆ, ನದಿ, ತೊರೆಗಳನ್ನು ದೈವಿಕವಾಗಿ ಕಾಣುವ ಗುಣ ನಮ್ಮ ಜನಪದ ಜನರಲ್ಲಿದೆ ಎಂದರು. 
ಮಹಿಳಾ ಜಾನಪದ ಪರಿಷತ್ತಿನ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ನಾವು ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ತಾಯಿ ಇಡೀ ಸಂಸಾರವನ್ನು ಪೋಷಿಸುವಂತೆ, ಪ್ರಕೃತಿ ನಮ್ಮನ್ನು ಸಲಹುತ್ತಿದೆ. ಜನಪದ ಮಗಳು ದೈನಂದಿನ ಬದುಕಿನಲ್ಲಿ, ಹಾಡುಗಳಲ್ಲಿ ಪರಿಸರವನ್ನೇ ಉಸಿರಾಡಿದ್ದಾಳೆ. ಆಧುನಿಕ ಜಗತ್ತಿನಲ್ಲಿ ಪರಿಸರ ನಾಶವಾಗುತ್ತಿರುವುದು ಆತಂಕಕಾರಿ ಸಂಗತಿ. ಪ್ರತಿ ಮಹಿಳೆಯೂ ಮನೆಯಂಗಳದಲ್ಲಿ, ಹಸಿರನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಗಿಡ, ಮರಗಳ ಮೇಲಿನ ಪ್ರೀತಿ ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ತಿನ ಉಪಾಧ್ಯಕ್ಷ ವಿನಾಯಕ, ಕಾರ್ಯದರ್ಶಿ ಭರತ್‌ರಾಜ್, ಮಹಿಳಾ ಕಾರ್ಯದರ್ಶಿ ಮಂಜುಳಾ, ಮನೋರಾದಿನಿ, ಕಲ್ಪನಾ, ಪ್ರೇಮ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net