ಹೊಸ ತಾಲೂಕು ಕಚೇರಿ ನಿರ್ಮಾಣಕ್ಕೆ ಅನುದಾನ

ಕಡೂರಿನ ನೂತನ ತಾಲೂಕು ಕಚೇರಿ ಸಮುಚ್ಚಯ ಕಟ್ಟಡ ನಿರ್ಮಾಣ ಜಾಗದ ಕುರಿತು ಕಂದಾಯ ಇಲಾಖೆ ಅಪರ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಭನ್ವರ್ ಸಿಂಗ್ ಮೀನಾ, ಸಿ.ಎಸ್.ಪೂರ್ಣಿಮಾ ಇತರರಿದ್ದರು.
ಕಡೂರಿನ ನೂತನ ತಾಲೂಕು ಕಚೇರಿ ಸಮುಚ್ಚಯ ಕಟ್ಟಡ ನಿರ್ಮಾಣ ಜಾಗದ ಕುರಿತು ಕಂದಾಯ ಇಲಾಖೆ ಅಪರ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಭನ್ವರ್ ಸಿಂಗ್ ಮೀನಾ, ಸಿ.ಎಸ್.ಪೂರ್ಣಿಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಂದಾಯ ಇಲಾಖೆ ಅಪರ ಕಾರ್ಯದರ್ಶಿ
  • ರಾಜೇಂದ್ರಕುಮಾರ್ ಕಟಾರಿಯಾ ಮಾಹಿತಿ
ಕಡೂರು: ಪ್ರವಾಸಿ ಮಂದಿರದ ಆವರಣದಲ್ಲಿ ಹೊಸ ತಾಲೂಕು ಕಚೇರಿ ಸಮುಚ್ಚಯ ನಿರ್ಮಾಣಕ್ಕೆ 16 ಕೋಟಿ ರೂ.  ಮಂಜೂರಾಗಿದೆ ಎಂದು ಕಂದಾಯ ಇಲಾಖೆ ಅಪರ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ತಿಳಿಸಿದರು.
 ತಾಲೂಕು ಕಚೇರಿ ಬಳಿಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಜಾಗ ಪರಿಶೀಲಿಸಿ ಮಾತನಾಡಿ, ತಾಲೂಕು ಕಚೇರಿ ಹಳೆಯದಾಗಿದ್ದು, ಕಟ್ಟಡಗಳು ಶಿಥಿಲವಾಗಿರುವ ಕಾರಣ, ಹೊಸ ಕಚೇರಿ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಹೊಸ ತಾಲೂಕು ಕಚೇರಿ ಸಮುಚ್ಚಯ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದೆ. ಕಟ್ಟಡಗಳ ಜಾಗ, ಕಾಂಪೌಂಡ್ ಸ್ಥಳ ಎಲ್ಲವನ್ನೂ ನಕ್ಷೆ ಆಧರಿಸಿ ಪರಿಶೀಲಿಸಿದ ಅವರು, ಯಾವುದೇ ಮರಗಳನ್ನು ಕತ್ತರಿಸಲು ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಇಲಾಖೆ ಗ್ರಾಮ ಸಹಾಯಕರನ್ನು ಹೊಸದಾಗಿ ಜಾರಿಯಾಗಿರುವ ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕೆಂದು ಕೋರಿ  ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ತಾಲೂಕು ಘಟಕದಿಂದ ರಾಜೇಂದ್ರಕುಮಾರ್ ಕಟಾರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಎಸ್.ಸಿ.ಮಲ್ಲಿಕಾರ್ಜುನ ಮಾತನಾಡಿ, ಕೇವಲ 15 ಸಾವಿರ ರೂ. ವೇತನದಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಸಹಾಯಕರಿಗೆ ಕುಟುಂಬ ನಿರ್ವಹಣೆ ತೀರ ಕಷ್ಟಕರವಾಗಿದೆ. ಶ್ರಮಿಕ ವರ್ಗದವರಿಗೆ ಅನ್ವಯಿಸುವಂತೆ ಉಲ್ಲೇಖಿಸಿ ಕನಿಷ್ಠ ವೇತನ ನಿಗದಿಪಡಿಸಿ ಸರ್ಕಾರ ಆದೇಶಿಸಿದೆ. ಸೇವಾ ಭದ್ರತೆ ಮತ್ತು ಕನಿಷ್ಠ ವೇತನ ನಿಗದಿಪಡಿಸಿಕೊಡುವಂತೆ ಮನವಿ ಮಾಡಿದರು. ಸಂಘದ ಗೌರವಾಧ್ಯಕ್ಷ ಎಂ.ಲೋಕೇಶ್, ಉಪಾಧ್ಯಕ್ಷ ಎಂ.ಎಚ್.ಗೋವಿಂದಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮಲ್ಲಪ್ಪ, ಖಜಾಂಚಿ ರವಿಕುಮಾರ್, ಸಹಕಾರ್ಯದರ್ಶಿ ಚಿಕ್ಕಯ್ಯ, ಕ್ರೀಡಾ ಕಾರ್ಯದರ್ಶಿ ಚಂದ್ರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net