ತಾಲೂಕಿನ ಹಿರೇನಲ್ಲೂರು-ಚೌಳಹಿರಿಯೂರು ಹಾಗೂ ಕಡೂರು ಕಸಬಾ ಭಾಗಗಳಲ್ಲಿ ಪ್ರತಿ ವರ್ಷದ ವಾಡಿಕೆಯಂತೆ ಸುಮಾರು 3,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಈರುಳ್ಳಿ ಬೆಳೆ ಈ ಬಾರಿ ಮಳೆಯಿಲ್ಲದೆ ಬಿತ್ತನೆಗೆ ಹಿನ್ನಡೆಯಾದರೆ, ನೀರಾವರಿ ವ್ಯವಸ್ಥೆ ಕಲ್ಪಿಸಿಕೊಂಡಿರುವ ಕೆಲ ರೈತರು ಸೇರಿದಂತೆ ಸುಮಾರು 350-400 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಗೆ ಈ ಬಾರಿ ಸೀಮಿತವಾಗಿದೆ.