ಶುದ್ದ ಗಂಗಾ ಘಟಕ ಸ್ಥಾಪನೆ ನಂತರ ಉದ್ಘಾಟಿಸಬೇಕಿತ್ತು. ಆದರೆ ಈ ಹಿಂದಿನ ಅವಧಿಯ ಅಧ್ಯಕ್ಷರ ಹತ್ತಿರದ ಸಂಬಂಧಿಯೊಬ್ಬರ ಹಸ್ತಕ್ಷೇಪದಿಂದ ಘಟಕ ಉದ್ಘಾಟನೆ ಆಗದಿದ್ದರೂ ಘಟಕ ಉದ್ಘಾಟನೆಯಾಗಿರುವ ಬಗ್ಗೆ ಸುಳ್ಳು ಮಾಹಿತಿ ಸೃಷ್ಟಿಸಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ಘಟಕ ಉದ್ಘಾಟಿಸಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಜಿ.ರಾಮಪ್ಪ ಮುಖ್ಯಅತಿಥಿಯಾಗಿ ಆಗಮಿಸಿದ್ದರು ಎಂದು ಸುಳ್ಳು ಮಾಹಿತಿಯನ್ನು ಒಳಗೊಂಡ ಉದ್ಘಾಟನೆ ನಾಮಲಕವನ್ನು ಅಳವಡಿಸಿರುವುದು ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.