ಮತದಾರರ ಪಟ್ಟಿಯಲ್ಲಿ ಸರ್ವರೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನೊಂದಾಯಿಸಿ

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ನಡೆ ನಿಮ್ಮ ಮತ ರಕ್ಷಣೆ ಕಡೆ, ಮತ ಹಕ್ಕು ರಕ್ಷಣೆ ಅಭಿಯಾನ ಸಂವಿಧಾನ ಸಮರ, ಪ್ರತಿ ಮತ ಉಳಿಸಿ ಆಂದೋಲನ, ಎಸ್.ಐ.ಆರ್. ಕಾರ್ಯಕ್ರಮವನ್ನುz್ದÉÃಶಿಸಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ನಡೆ ನಿಮ್ಮ ಮತ ರಕ್ಷಣೆ ಕಡೆ, ಮತ ಹಕ್ಕು ರಕ್ಷಣೆ ಅಭಿಯಾನ ಸಂವಿಧಾನ ಸಮರ, ಪ್ರತಿ ಮತ ಉಳಿಸಿ ಆಂದೋಲನ, ಎಸ್.ಐ.ಆರ್. ಕಾರ್ಯಕ್ರಮವನ್ನುz್ದÉÃಶಿಸಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿದರು.
Published on
ಚಿಕ್ಕಮಗಳೂರು: ಒಬ್ಬ ಪ್ರಾಮಾಣಿಕ ಮತದಾರನ ಹೆಸರು ಮತಪಟ್ಟಿಯಿಂದ ಕೈತಪ್ಪಿ ಹೋಗಬಾರದು ಎಂಬುದು ಎಸ್ ಐ ಆರ್ ಪ್ರಕ್ರಿಯೆಯ ಉz್ದೆÃಶ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ನಡೆ ನಿಮ್ಮ ಮತ ರಕ್ಷಣೆ ಕಡೆ, ಮತ ಹಕ್ಕು ರಕ್ಷಣೆ ಅಭಿಯಾನ ಸಂವಿಧಾನ ಸಮರ, ಪ್ರತಿ ಮತ ಉಳಿಸಿ ಆಂದೋಲನ, ಎಸ್.ಐ.ಆರ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳಾದ ಗ್ಯಾರಂಟಿ ಯೋಜನೆಗಳ ಸಹಿತ ಸಬ್ಸಿಡಿ ಪಡೆಯುತ್ತಿರುವ ಮತದಾರನಿಗೆ ಮುಂದಿನ ದಿನಗಳಲ್ಲಿ ಓಟರ್ ಐಡಿ ಇಲ್ಲದಿದ್ದರೆ ಸೌಲಭ್ಯಗಳು ಕೈ ತಪ್ಪುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮತದಾರರಲ್ಲಿ ಅರಿವು ಮೂಡಿಸುವುದರ ಅಗತ್ಯ ಇದೆ ಎಂದು ಹೇಳಿದರು.
ಎಸ್.ಐ.ಆರ್. ಬಗ್ಗೆ ಇರುವ ಭಯವನ್ನು ನಿವಾರಣೆ ಮಾಡಲು ಚುನಾವಣಾ ಆಯೋಗ ಮಾಡಿರುವ ವ್ಯವಸ್ಥೆ ಬಗ್ಗೆ ಪಕ್ಷದ ಬಿಎಲ್ ಎ ೨ ಗಳಿಗೆ ತಿಳಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ತರಬೇತಿ ನೀಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪಕ್ಷದಲ್ಲಿನ ಹಲವರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಪ್ರಸಕ್ತ ಸಾಲಿನ ನವೆಂಬರ್ ವೇಳೆಗೆ ನಡೆಸಬೇಕೆಂದು ಸರ್ಕಾರ ನಿರ್ಧರಿಸಿದ್ದು, ನಂತರ ನಗರಸಭೆ ಚುನಾವಣೆ ನಡೆಯಲಿದೆ. ಬಳಿಕ ವಿಧಾನಸಭೆ ಚುನಾವಣೆ ನಂತರ ಲೋಕಸಭಾ ಚುನಾವಣೆ ನಡೆಯಲಿದ್ದು, ಮೊದಲು ತೊಂದರೆಯಾದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ಮಾಡಲು ಬರುವ ಮತದಾರರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಹೆಚ್ಚು ಒತ್ತಡ ಹಾಕಿದ ಪರಿಣಾಮ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.೮೫ ಗ್ರಾಮೀಣ ಭಾಗದಲ್ಲಿ ಶೇ.೮೦, ನಗರ ಭಾಗದಲ್ಲಿ ಶೇ.೫೫ ಇತ್ತು. ಈಗ ಶೇ.೭೮ ಆಗಿದೆ. ಜೂನ್ ೩೦ರಿಂದ ಜುಲೈ ೨೯ ರವರೆಗೆ ಬಿಎಲ್ ಎ ಗಳನ್ನು ಬಿಎಲ್ ಓ ಗಳ ಜೊತೆಮಾಡಿ ಮನೆ ಮನೆಗೆ ಅರ್ಜಿ ನೀಡಿ ಭರ್ತಿ ಮಾಡಿಸುವ ಬಹುದೊಡ್ಡ ಹೊಣೆಗಾರಿಕೆ ಇದೆ ಎಂದರು.
ಮತದಾರರಿAದ ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮ್ಯಾಪಿಂಗ್ ಅರ್ಜಿಯನ್ನು ಬಿಎಲ್ ಓ ಗಳು ಭರ್ತಿ ಮಾಡುತ್ತಾರೆ. ಇವರೊಂದಿಗೆ ಒಳ್ಳೆಯ ಸಂಪರ್ಕವನ್ನು ಬಿಎಲ್ ಎ ೨ ಗಳು ಹೊಂದಿರಬೇಕೆAದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಮಾತನಾಡಿ ಮತಪಟ್ಟಿಯಿಂದ ಮತದಾರನ ಹೆಸರು ಬಿಟ್ಟುಹೋಗದಂತೆ ಎಸ್ ಐ ಆರ್ ಮೂಲಕ ಕ್ರಮವಹಿಸುವುದು ಬಿಎಲ್ ಎ ೨ ಗಳ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಪ್ರತಿ ಭೂತ್ ಮಟ್ಟದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಅನುಷ್ಟಾನಕ್ಕೆ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಹಾಗೂ ನಗರಸಭೆ ವಾರ್ಡ್ಗಳ ಮಟ್ಟಕ್ಕೆ ಬಿಎಲ್ ಎ ೨ ಗಳನ್ನು ಸರ್ಕಾರ ನಿಯೋಜನೆ ಮಾಡಿದೆ. ಈಗಾಗಲೆ ಇವರುಗಳಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಜಾಗರ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಎ ಐ ಆರ್ ಕುರಿತ ಉಸ್ತುವಾರಿಯಾಗಿ ಪಕ್ಷದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಕುರುವಂಗಿ ಕ್ಷೇತ್ರಕ್ಕೆ ವಕೀಲ ಡಿ.ಸಿ. ಪುಟ್ಟೇಗೌಡ, ಲಕ್ಯ ಕ್ಷೇತ್ರಕ್ಕೆ ಹೆಚ್.ಪಿ. ಮಂಜೇಗೌಡ, ಸಖರಾಯಪಟ್ಟಣ ಕ್ಷೇತ್ರಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ದೇವನೂರು ಕ್ಷೇತ್ರಕ್ಕೆ ಮಾಜಿ ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಕಳಸಾಪುರ ಜಿ.ಪಂ. ಕ್ಷೇತ್ರಕ್ಕೆ ರವೀಶ್ ಬಸಪ್ಪ ಇವರುಗಳನ್ನು ಎಸ್ ಐ ಆರ್ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ ಎಂದರು.
ನಗರ ಪ್ರದೇಶಕ್ಕೆ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಸಿಡಿಎ ಮಾಜಿ ಅಧ್ಯಕ್ಷ ನಯಾಜ್ ಅಹಮದ್, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಇವರುಗಳ ಜೊತೆಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಐವರನ್ನು ಎಸ್ ಐ ಆರ್ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯುಂಟುಮಾಡಲು ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಪಕ್ಷದ ಮುಖಂಡರು ಗಂಭೀರವಾಗಿ ಪರಿಗಣಿಸಿ ಪಕ್ಷದ ಪರವಾಗಿ ಬಿಎಲ್ ಎ ೨ ಗಳು ಒಂದು ತಿಂಗಳು ಪರಿಶ್ರಮದಿಂದ ನಿರಂತರ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಎಂ.ಎಲ್.ಮೂರ್ತಿ, ಸೈಯದ್ ಹನೀಫ್, ಕೆ.ಮಹಮದ್, ನಯಾಜ್ ಅಹಮದ್, ರೂಬಿನ್ ಮೋಸಸ್, ಅಜೀಜ್, ಜಗದೀಶ್, ನವೀನ್ ಎತ್ತಿನ ಮನೆ, ಶಿವಕುಮಾರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net