ಸಾಂಸ್ಕೃತಿಕ ಪರಂಪರೆ, ಕಲಾಸೇವೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ

ಚಿಕ್ಕಮಗಳೂರು ಹೊರವಲಯದಲ್ಲಿ ಜ್ಞಾನಸುಧಾ ಫೌಂಢೇಷನ್ ವತಿಯಿಂದ  ಮಲೆನಾಡು ನುಡಿಸಿರಿ ಆರನೇ ಮಾಸದ ಕಾರ್ಯಕ್ರಮ ಹಾಗೂ ಹಿರಿಯ ಗಾಯಕಿ ದಿ. ಎಸ್.ಜಾನಕಿಯವರ ಸ್ಮರಣೋತ್ಸವ ಕಾರ್ಯಕ್ರಮ ನೆರವೇರಿತು. ಸುಮಾ ಪ್ರಸಾದ್‌, ಡಾ.ಯೋಗೀಶ್‌, ಸುಮಂಗಲಾ, ಸ್ವರೂಪ್‌ ಭಾರದ್ವಾಜ್‌, ಜ್ಞಾನಸುಧಾ, ಸಿ.ಎಲ್‌.ವಿಜಯ್‌ ಮತ್ತಿತರರಿದ್ದರು.
ಚಿಕ್ಕಮಗಳೂರು ಹೊರವಲಯದಲ್ಲಿ ಜ್ಞಾನಸುಧಾ ಫೌಂಢೇಷನ್ ವತಿಯಿಂದ ಮಲೆನಾಡು ನುಡಿಸಿರಿ ಆರನೇ ಮಾಸದ ಕಾರ್ಯಕ್ರಮ ಹಾಗೂ ಹಿರಿಯ ಗಾಯಕಿ ದಿ. ಎಸ್.ಜಾನಕಿಯವರ ಸ್ಮರಣೋತ್ಸವ ಕಾರ್ಯಕ್ರಮ ನೆರವೇರಿತು. ಸುಮಾ ಪ್ರಸಾದ್‌, ಡಾ.ಯೋಗೀಶ್‌, ಸುಮಂಗಲಾ, ಸ್ವರೂಪ್‌ ಭಾರದ್ವಾಜ್‌, ಜ್ಞಾನಸುಧಾ, ಸಿ.ಎಲ್‌.ವಿಜಯ್‌ ಮತ್ತಿತರರಿದ್ದರು.
Published on

ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಕಲಾಸೇವೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಮನರಂಜನೆಗಾಗಿ ಇಲ್ಲ. ಅದು ಮನುಷ್ಯನ ಶಿಸ್ತನ್ನು ಕಲಿಸುವ ಸಾಧನ ಎಂದು ಚಿಂತಕಿ ಸುಮಾ ಪ್ರಸಾದ್ ಹೇಳಿದರು.

ನಗರದ ಹೊರವಲಯದಲ್ಲಿ ಜ್ಞಾನಸುಧಾ ಫೌಂಢೇಷನ್ ವತಿಯಿಂದ ಮಲೆನಾಡು ನುಡಿಸಿರಿ ಆರನೇ ಮಾಸದ ಕಾರ್ಯಕ್ರಮ ಹಾಗೂ ಹಿರಿಯ ಗಾಯಕಿ ದಿ. ಎಸ್.ಜಾನಕಿಯವರ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಪರಿಣಾಮದಿಂದಾಗಿ ಗೀತಗಾಯನ, ಸಾಹಿತ್ಮಾತ್ಮಕ ಚಟುವಟಿಕೆ, ಕವಿತೆ ರಚನೆಗಳು, ಬರವಣಿಯ ಕಲೆಗಳು ನಶಿಸಿ ಹೋಗುತ್ತಿವೆ. ಆ ನಿಟ್ಟಿನಲ್ಲಿ ಪೂರ್ವಿಕರು ಕಟ್ಟಿ ಬೆಳೆಸಿದ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಈ ದಿಸೆಯಲ್ಲಿ ಕಲಾವಿದರಿಗೆ ಉತ್ತೇಜನ ನೀಡಬೇಕಿದೆ. ಇಂತಹ ಕಾರ್ಯಕ್ರಮಗಳ ಮೂಲಕವೇ ಕಲೆಗಳನ್ನು ಬೆಳೆಸಬೇಕಿದೆ ಎಂದರು.
ಎಳೆ ವಯಸ್ಸಿನಿಂದಲೇ ಪುಟಾಣಿ ಮಕ್ಕಳಿಗೆ ಜ್ಞಾನಸುಧಾ ಫೌಂಡೇಷನ್ ಸಾಹಿತ್ಮಾತ್ಮಕ ಚಟುವಟಿಕೆಗೆ ವೇದಿಕೆ ಕಲ್ಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೀಗಾಗಿ ಆಸಕ್ತ ಮಕ್ಕಳು ತಮ್ಮಲ್ಲಿರುವ ಅಗಾಧ ಪ್ರತಿಭೆಯನ್ನು ಹೊರಚೆಲ್ಲಲು ದೊರಕಿಸುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೆ.ಆರ್.ಎಸ್. ಆಸ್ಪತ್ರೆ ಮುಖ್ಯಸ್ಥ ಕೆ.ಆರ್.ಯೋಗೀಶ್ ಮಾತನಾಡಿ, ಆಧುನಿಕ ಜಗತ್ತಿನ ಮಕ್ಕಳು ಕೇವಲ ಮನೆಗಳಲ್ಲಿ ಆಟಗಳಿಗೆ ಸೀಮಿತಗೊಳ್ಳುತ್ತಿದ್ದಾರೆಯೇ ಹೊರತು, ಹೊರಾಂಗಣ ಆಟಕ್ಕೆ ಒತ್ತು ನೀಡುತ್ತಿಲ್ಲ. ಆದ್ದರಿಂದ ನಾಡಿನ ಶ್ರೇಷ್ಟ ದಾರ್ಶನಿಕರು, ಸಂತರ ಜೀವನ ಚರಿತ್ರೆ ಅರಿತುಕೊಂಡು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಪ್ತಸ್ವರ ಸೇವಾ ಸಂಸ್ಥೆ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಹಿರಿಯ ಗಾಯಕಿ ಎಸ್.ಜಾನಕಿ ಕಂಠವು ಕನ್ನಡಿಗರಿಗೆ ಅತಿಪ್ರೀತಿಪಾತ್ರವಾದದು. ಅನೇಕ ಚಲನಚಿತ್ರಗಳ ಗೀತೆಗಳ ಮೂಲಕವೇ ಕನ್ನಡಿಗರ ಹೃದಯಲ್ಲಿ ನೆಲೆಸಿರುವ ಹಿರಿಯ ಗಾಯಕಿ ಎಂದರೆ ತ ಪ್ಪಾಗಲಾರದು ಎಂದು ಹೇಳಿದರು.
ಇದೇ ವೇಳೆ ಪುಟಾಣಿ ಮಕ್ಕಳಿಂದ ಗೀತಗಾಯನ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ, ನಡೆಯಿತು. ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರ್ ಸ್ವರೂಪ್ ಭಾರಧ್ವಾಜ್, ಜ್ಞಾನಸುಧಾ ಫೌಂಡೇಷನ್ ಸಂಸ್ಥಾಪಕ ಎ.ಎನ್.ಸುರೇಶ್, ಶಿಕ್ಷಕ ಅಶೋಕ್, ಕಾಫಿ ಬೆಳೆಗಾರ ಸಿ.ಎಲ್.ವಿಜಯ್ ಹಾಗೂ ದಾಂಡೇಲಿ ಗಾಯಕ-ಗಾ ಯಕಿಯರು, ಸಾಹಿತ್ಯಾಕಸ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net