ಮೇವು ಬ್ಯಾಂಕ್ ಶೀಘ್ರ ಸ್ಥಾಪಿಸಿ (jds party)

ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದ ಸಮೀಪದ ಜಮೀನಿನಲ್ಲಿ ರೈತರೊಂದಿಗೆ ಮಾಜಿ ಶಾಸಕ ವೈಎಸ್‌ವಿ ದತ್ತ ಚರ್ಚಿಸಿದರು. ಡಿ.ಪ್ರಶಾಂತ್, ಸಿ.ಎಚ್.ಪ್ರೇಮ್ಕುಮಾರ್, ಈಶ್ವರಪ್ಪ, ಸುಪ್ರಿತ್ ಇತರರಿದ್ದರು.
ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದ ಸಮೀಪದ ಜಮೀನಿನಲ್ಲಿ ರೈತರೊಂದಿಗೆ ಮಾಜಿ ಶಾಸಕ ವೈಎಸ್‌ವಿ ದತ್ತ ಚರ್ಚಿಸಿದರು. ಡಿ.ಪ್ರಶಾಂತ್, ಸಿ.ಎಚ್.ಪ್ರೇಮ್ಕುಮಾರ್, ಈಶ್ವರಪ್ಪ, ಸುಪ್ರಿತ್ ಇತರರಿದ್ದರು.
Published on
ಕಡೂರು: ಮುಂಗಾರು ಕೈಕೊಟ್ಟ ಪರಿಣಾಮ ಅಂತರ್ಜಲ ಮಟ್ಟ ಇಳಿಕೆಯಿಂದ ಕೆರೆಕಟ್ಟೆಗಳು ಬರಿದಾಗಿದ್ದು ರೈತರು ಬರದ ಸಂಕಷ್ಟದಲ್ಲಿ ನಲುಗುತ್ತಿದ್ದಾರೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಆತಂಕ ವ್ಯಕ್ತಪಡಿಸಿದರು.
ಹಿರೇನಲ್ಲೂರು, ಯಳ್ಳಂಬಳಸೆ ಹಾಗೂ ಬೀರೂರು ಹೋಬಳಿ ಭಾಗದ ಗ್ರಾಮಗಳಿಗೆ ಭಾನುವಾರ ಜೆಡಿಎಸ್‌ನಿಂದ ಬರ ಪರಿಸ್ಥಿತಿ ಅಧ್ಯಯನ ನಡೆಸಿ ಬಳಿಕ ಮಾತನಾಡಿ, ಮಳೆಯಿಲ್ಲದೆ ಪರಿತಪಿಸುತ್ತಿರುವ ರೈತರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ. ನಾನು ತಾಲೂಕಿನ ಮೂರ್ನಾಲ್ಕು ಹೋಬಳಿ ಭಾಗಗಳಲ್ಲಿನ ಗ್ರಾಮಗಳಿಗೆ ಭೇಟಿ ನೀಡಿ ನಡೆಸಿರುವ ಬರಪರಿಸ್ಥಿತಿ ಅಧ್ಯಯನದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿಯೇ ಪರಿಸ್ಥಿತಿಗಳು ಕಂಡು ಬರುತ್ತಿದೆ ಎಂದರು.
 ಮಳೆಯ ಅಭಾವದಿಂದ ಬಿತ್ತನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಂಠಿತವಾಗಿರುವುದು ಒಂದಡೆಯಾದರೆ ವೃದ್ಧ ರೈತಾಪಿ ವರ್ಗಕ್ಕೆ ಬರಬೇಕಾದ ವೃದ್ಧಾಪ್ಯ ವೇತನ ಬಾರದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದಂತಾಗಿದೆ ಎಂದರು.
ಹುಲ್ಲೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬಂದಿದೆ. ಮೇವಿಲ್ಲದೆ ಸೊರಗುತ್ತಿರುವ ದನಕರುಗಳು ಕಣ್ಣು ಮುಂದೆಯೇ ಸಾಯುವ ಸ್ಥಿತಿಗೆ ತಲುಪುವುದು ನೋಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಮೇವು ಬ್ಯಾಂಕ್ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಡುವಂತೆ ರೈತರು ಕಣ್ಣೀರುಡುತ್ತಿದ್ದ ದೃಶ್ಯ ಮನಕುಲುಕುವಂತಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ತುರ್ತಾಗಿ ಬರಪೀಡಿತ ತಾಲೂಕಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು. 
ಹುಲ್ಲೇಹಳ್ಳಿ, ಹಿರೇನಲ್ಲೂರು, ಬಿಸಲೆರೆ, ಗರ್ಜೆ, ಯಳ್ಳಂಬಳಸೆ, ಸೋಮನಹಳ್ಳಿ, ಕುಪ್ಪಾಳು ಭಾಗದ ಗ್ರಾಮಗಳಿಗೆ ಭೇಟಿ ನೀಡಿದರು. ಪಕ್ಷದ ಮುಖಂಡರಾದ ಡಿ.ಪ್ರಶಾಂತ್, ಸಿ.ಎಚ್.ಪ್ರೇಮ್ಕುಮಾರ್, ಯಳಗೊಂಡನಹಳ್ಳಿ ಈಶ್ವರಪ್ಪ, ಸುಪ್ರಿತ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net