ಶಿಕ್ಷಕರ ಸಂಘದ ನಿರ್ದೇಶಕರ ಆಯ್ಕೆ

ತರೀಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರನ್ನು ಅಭಿನಂದಿಸಲಾಯಿತು. ಸಿ.ಆರ್.ಅನಂತಪ್ಪ, ಎಸ್.ಟಿ.ತಿಪ್ಪೇಶಪ್ಪ, ಎಂ.ಬಿ.ರಾಮಚಂದ್ರಪ್ಪ, ಡಿ.ಸುರೇಶ, ಬಿ.ಆರ್.ವೆಂಕಟೇಶ್, ಡಿ.ಮಂಜುನಾಥ ಇತರರಿದ್ದರು.
ತರೀಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರನ್ನು ಅಭಿನಂದಿಸಲಾಯಿತು. ಸಿ.ಆರ್.ಅನಂತಪ್ಪ, ಎಸ್.ಟಿ.ತಿಪ್ಪೇಶಪ್ಪ, ಎಂ.ಬಿ.ರಾಮಚಂದ್ರಪ್ಪ, ಡಿ.ಸುರೇಶ, ಬಿ.ಆರ್.ವೆಂಕಟೇಶ್, ಡಿ.ಮಂಜುನಾಥ ಇತರರಿದ್ದರು.
Published on
ತರೀಕೆರೆ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ ಶುಕ್ರವಾರ ಚುನಾವಣೆ ನಡೆಯಿತು. 6 ಸಾಮಾನ್ಯ, 3 ಮಹಿಳಾ ಕ್ಷೇತ್ರ ಸೇರಿ ಒಟ್ಟು 9 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಲಕ್ಕವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಚ್.ಬಿ.ಆನಂದ್‌ಕುಮಾರ್, ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ಧರಣೇಶ್, ಬೆಟ್ಟತಾವರೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ಕುಮಾರಸ್ವಾಮಿ, ನೇರಲಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸಿ.ಎಸ್.ಬಸವರಾಜಪ್ಪ, ರಂಗೇನಹಳ್ಳಿ ಕೆಪಿಎಸ್ ಶಿಕ್ಷಕ ಕೆ.ಎಂ.ಮಹೇಶ, ಲಕ್ಕವಳ್ಳಿ ಇಂದಿರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎನ್.ಹರೀಶ್, ಎಚ್.ಮಲ್ಲೇನಹಳ್ಳಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸಿ.ವನಜಾಕ್ಷಿ, ಇಟ್ಟಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎನ್.ಇ.ಮೀನಾಕ್ಷಮ್ಮ ಹಾಗೂ ತರೀಕೆರೆ ಎಂ.ಜಿ.ರಸ್ತೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಸ್.ಶಾಂತಮ್ಮ ಅವರು ಪ್ರತಿಸ್ಪರ್ಧಿಗಳನ್ನು ಮಣಿಸಿ 2026ರಿಂದ 31ನೇ ಸಾಲಿನವರೆಗಿನ ಐದು ವರ್ಷಗಳ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾದರು. ಟಿ.ಚಂದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net