ಮಹಿಳೆಯ ಸಾಧನೆಗೆ ಶಿಕ್ಷಣ ರಹದಾರಿ

ಕಡೂರು ತಾಲೂಕಿನ ಪಟ್ಟಣಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶೆ ನಳೀನಾ ಉದ್ಘಾಟಿಸಿದರು. ಮಂಜುನಾಥಾಚಾರಿ, ತಹಖಲೀಲ್ ಮತ್ತಿತರರಿದ್ದರು.
ಕಡೂರು ತಾಲೂಕಿನ ಪಟ್ಟಣಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶೆ ನಳೀನಾ ಉದ್ಘಾಟಿಸಿದರು. ಮಂಜುನಾಥಾಚಾರಿ, ತಹಖಲೀಲ್ ಮತ್ತಿತರರಿದ್ದರು.
Published on
ಕಡೂರು: ಸಮಾಜದಲ್ಲಿ ಎಲ್ಲ ಹೆಣ್ಣು ಮಕ್ಕಳೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಎಲ್ಲ ರಂಗದಲ್ಲೂ ಮೇಲುಗೈ ಸಾಧಿಸಿದಾಗ ಮಾತ್ರ ಮಹಿಳೆಯರು ಗೌರವ ಪಡೆಯಲು ಹಾಗೂ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಳಿನಾ ತಿಳಿಸಿದರು.
 ಪಟ್ಟಣಗೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಇದರ ಜತೆ ನ್ಯಾಯಾಂಗ ವ್ಯವಸ್ಥೆ ಬಲಪಡಿಸುವ ಸಲುವಾಗಿ ರೂಪಿಸುವ ಕಾನೂನುಗಳ ತಿಳಿವಳಿಕೆ ಪಡೆಯಬೇಕಿದೆ ಎಂದರು.
ಆರೋಗ್ಯಕರ ಜೀವನ ಶೈಲಿಗೆ ಪರಿಸರ ಅತಿಮುಖ್ಯ. ಪರಿಸರದ ಸಂರಕ್ಷಣೆಗೆ ಮಹತ್ವ ನೀಡಿದರೆ ಭವಿಷ್ಯದ ದಿನಗಳಲ್ಲಿ ಪರಿಸರ ನಮ್ಮನ್ನು ಕಾಪಾಡಲಿದೆ ಎಂದರು.
 ಒಂದನೇ ಹೆಚ್ಚುವರಿ ನ್ಯಾಯಾಧೀಶ ಮಂಜುನಾಥಾಚಾರಿ ಅವರು ಮಕ್ಕಳ ಹಕ್ಕುಗಳು ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮೂರನೇ ಸಿವಿಲ್ ನ್ಯಾಯಾಧೀಶ ತಹಖಲೀಲ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕಲೀಂಮುಲ್ಲಾ, ಶ್ರೀನಿವಾಸ್, ಪೂಜಾ, ಉಪನ್ಯಾಸಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net