ಅಳವಡಿಸಿರುವ ಪೈಪ್ ಮತ್ತು ನಲ್ಲಿಗಳೆಲ್ಲವೂ ಕಳಪೆಯದ್ದಾಗಿದೆ. ನೀರನ್ನು ಅಳತೆ ಮಾಡುವ ಕಳಪೆ ದರ್ಜೆಯ ಮೀಟರ್ ಕೂಡ ನಲ್ಲಿಯೊಂದಿಗೆ ಅಳವಡಿಸಲಾಗಿದೆ. ಮಾರ್ಕೆಟ್ ರಸ್ತೆಯ ಆದಿಶಕ್ತಿ ದೇವಸ್ಥಾನದ ಗೋಡೆಗೆ 4 ನಲ್ಲಿಗಳನ್ನು ಮೀಟರ್ ಸಹಿತ ಒಟ್ಟಿಗೆ ಗುಂಪಾಗಿ ಅಳವಡಿಸಲಾಗಿದೆ. ಅಲ್ಲಿ ಕೊಡ ಹಿಡಿದು ನೀರು ತುಂಬಿಸಿಕೊಳ್ಳುವುದು ಹೇಗೆಂದು ತಿಳಿಯುತ್ತಿಲ್ಲ. ಪಟ್ಟಣದ ಬಹುತೇಕ ಮನೆಗಳಿಗೆ ಅಳವಡಿಸಿರುವ ನಲ್ಲಿಯನ್ನು ಮನೆಗಳಿಂದ ಕೊಳಚೆ ನೀರು ಹರಿಯುವ ಚರಂಡಿಗೆ ಅಳವಡಿಸಲಾಗಿದೆ. ಕೆಲವೆಡೆ ಮನೆಯ ಗೋಡೆ ಮತ್ತು ಕಾಂಪೌಂಡ್‌ಗೆ ನಲ್ಲಿಯನ್ನು ಬೇಕಾಬಿಟ್ಟಿಯಾಗಿ ಅಳವಡಿಸಲಾಗಿದೆ. ನಲ್ಲಿಯಿಂದ ನೀರು ಹಿಡಿಯುವ ವಿಧಾನ ಹೇಗೆ ಎಂದು ತಿಳಿಯದೆ ಜನ ಕಂಗಾಲಾಗಿದ್ದಾರೆ. ಈಗ ಪೈಪ್ ಮತ್ತು ನಲ್ಲಿ ಅಳವಡಿಕೆ ಕಾರ್ಯ ಎರಡು ತಿಂಗಳಿನಿಂದ ಸ್ಥಗಿತಗೊಂಡಿದೆ.