ಗ್ರಾಮೀಣ ಜನರಿಗೆ ಡಿಜಿ ಪೇ ಸೌಲಭ್ಯ (DigiPay)

ಬಾಳೆಹೊನ್ನೂರು ಸಮೀಪದ ಖಾಂಡ್ಯ ವಲಯದಲ್ಲಿ ಆರಂಭಗೊಂಡ ಡಿಜಿ ಪೇ ಆನ್‌ಲೈನ್ ಪೇಮೆಂಟ್ ಸೌಲಭ್ಯವನ್ನು ಗ್ರಾಪಂ ಅಧ್ಯಕ್ಷ ಸಂಪತ್ ಉದ್ಘಾಟಿಸಿದರು. ದೇವರಾಜ್, ವಿಜಯಕುಮಾರ್, ಪಲ್ಲವಿ, ರೇಖಾ, ಗಿರೀಶ್, ಅವಿನಾಶ್ ಇದ್ದರು.
ಬಾಳೆಹೊನ್ನೂರು ಸಮೀಪದ ಖಾಂಡ್ಯ ವಲಯದಲ್ಲಿ ಆರಂಭಗೊಂಡ ಡಿಜಿ ಪೇ ಆನ್‌ಲೈನ್ ಪೇಮೆಂಟ್ ಸೌಲಭ್ಯವನ್ನು ಗ್ರಾಪಂ ಅಧ್ಯಕ್ಷ ಸಂಪತ್ ಉದ್ಘಾಟಿಸಿದರು. ದೇವರಾಜ್, ವಿಜಯಕುಮಾರ್, ಪಲ್ಲವಿ, ರೇಖಾ, ಗಿರೀಶ್, ಅವಿನಾಶ್ ಇದ್ದರು.
Published on
ಬಾಳೆಹೊನ್ನೂರು: ಗ್ರಾಮೀಣ ಜನರಿಗೆ ನಿತ್ಯ ಆರ್ಥಿಕ ವಹಿವಾಟು ನಡೆಸಲು ಡಿಜಿ ಪೇ ಸೌಲಭ್ಯ ಅತ್ಯುತ್ತಮವಾಗಿದೆ ಎಂದು ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್ ಹೇಳಿದರು.
ಖಾಂಡ್ಯ ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಸೋಮವಾರದಿಂದ ಆರಂಭಗೊಂಡ ಡಿಜಿ ಪೇ ಆನ್‌ಲೈನ್ ಪೇಮೆಂಟ್ ಸೌಲಭ್ಯ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು, ಕೂಲಿ ಕಾರ್ಮಿಕರು, ಸಾಮಾನ್ಯ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿದ್ದು ನಿತ್ಯವೂ ಬ್ಯಾಂಕ್, ಸಹಕಾರ ಸಂಘ, ಇತರ ಖಾಸಗಿ ಬ್ಯಾಂಕ್‌ಗಳಿಗೆ ತೆರಳಿ ಆರ್ಥಿಕ ವಹಿವಾಟು ನಡೆಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ತಂದಿರುವ ಡಿಜಿ ಪೇ ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯು ಸ್ಥಳೀಯರಿಗೆ ಅನುಕೂಲ ಕಲ್ಪಿಸಿದೆ. ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದಲ್ಲಿ ಉತ್ತಮ ಆರ್ಥಿಕ ಕ್ರಾಂತಿಯನ್ನು ಉಂಟುಮಾಡಿದ್ದು ಮಹಿಳೆಯರು, ಸಾಮಾನ್ಯ ವರ್ಗದವರಿಗೆ ಆರ್ಥಿಕ ಸದೃಢತೆ ನೀಡಿದೆ ಎಂದರು. 
ವಲಯ ಮೇಲ್ವಿಚಾರಕ ದೇವರಾಜ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ಚಟುವಟಿಕೆ, ಯೋಜನೆಗಳನ್ನು ಜಾರಿಗೊಳಿಸಿದ್ದು ಗ್ರಾಮಾಂತರ ಪ್ರದೇಶಗಳಲ್ಲಿನ ಜನರ ಏಳಿಗೆಯೇ ಇದರ ಪ್ರಮುಖ ಉದ್ದೇಶ. ಡಿಜಿ ಪೇ ಮೂಲಕ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಆಧಾರ್ ಕಾರ್ಡ್, ಪಾಸ್‌ಬುಕ್ ಬಳಕೆಯ ಮೂಲಕ ನಿತ್ಯ ನಿಗದಿತ ಮೌಲ್ಯದ ಹಣವನ್ನು ವಿಥ್ ಡ್ರಾ ಮಾಡಿಕೊಳ್ಳಬಹುದು. ಸಾರ್ವಜನಿಕರು ಇದರ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಖಾಂಡ್ಯ ಶೌರ್ಯ ಘಟಕದ ಅಧ್ಯಕ್ಷ ವಿಜಯಕುಮಾರ್, ಪಿಎಸಿಎಸ್ ನಿರ್ದೇಶಕಿ ಪಲ್ಲವಿ, ಒಕ್ಕೂಟದ ಅಧ್ಯಕ್ಷೆ ರೇಖಾ, ಗಿರೀಶ್, ನೋಡೆಲ್ ಅಧಿಕಾರಿ ಅವಿನಾಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net