ದಿನದರ್ಶಿಕೆ ಬಿಡುಗಡೆ

-ಶೃಂಗೇರಿ ತಾಲೂಕಿನ ಗುಬ್ಬಗೋಡಿನಲ್ಲಿ ಹೆಬ್ಬಾರ ಸಮಾಜದ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ವೆಂಕಟರಾವ್, ಆದಿತ್ಯ, ಮಹಾಬಲ ಇದ್ದರು.
-ಶೃಂಗೇರಿ ತಾಲೂಕಿನ ಗುಬ್ಬಗೋಡಿನಲ್ಲಿ ಹೆಬ್ಬಾರ ಸಮಾಜದ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ವೆಂಕಟರಾವ್, ಆದಿತ್ಯ, ಮಹಾಬಲ ಇದ್ದರು.
Published on
ಕಡೂರು: ತಾಲೂಕಿನ ಸರಸ್ವತಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿರ್ವಹಣೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಶಾಲೆಯ ಪಾಲಕರು ಮತ್ತು ಗ್ರಾಮಸ್ಥರ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಎಸ್.ಎಲ್.ಮಂಜಪ್ಪ ಮಾತನಾಡಿ, ಗ್ರಾಮದ ಶಾಲೆಯಲ್ಲಿ ಈ ಹಿಂದೆ 2016ರಿಂದ ಪ್ರಭಾರ ಮುಖ್ಯಶಿಕ್ಷಕಿಯಾಗಿ ಶಶಿಕಲಾ ಅಧಿಕಾರವಹಿಸಿಕೊಂಡ ಬಳಿಕ 2024ರವರೆಗೂ ಅವರ ಕಾರ್ಯನಿರ್ವಹಣೆ ಬಗ್ಗೆ ಗ್ರಾಮದಲ್ಲಿ ಅಸಮಾಧಾನವಿದೆ. ಶಾಲೆಯ ಎಸ್‌ಡಿಎಂಸಿ ಸಮಿತಿಯ ಅನುಮತಿ ಪಡೆಯದೆ ಕೇವಲ ನಾಲ್ಕೈದು ಸದಸ್ಯರೊಡನೆ ಸೇರಿ ಹಲವಾರು ಬಾರಿ ಶಾಲೆಯ ಎಸ್‌ಡಿಎಂಸಿ ಮತ್ತು ಇತರ ಅನುದಾನದ ಬಳಕೆಯಲ್ಲಿ ವಹಿವಾಟು ನಡೆಸಿ ಹಣವನ್ನು ಡ್ರಾ ಮಾಡಿದ್ದಾರೆ. ಶಾಲೆಯ ನಗದು ಪುಸ್ತಕಕ್ಕೂ ಬ್ಯಾಂಕ್ ಖಾತೆ ಪುಸ್ತಕಕ್ಕೂ ತಾಳೆ ಯಾಗುತ್ತಿಲ್ಲ ಎಂದು ಆರೋಪಿಸಿದರು. 
 ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಗ್ರಾಮಸಭೆಯಲ್ಲೂ ಸಹ ನಿರ್ಣಯ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಕೂಡಲೇ ಶಾಲೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ರುದ್ರೇಗೌಡ, ಗ್ರಾಮದ ಮುಖಂಡರಾದ ರಂಗಸ್ವಾಮಿ, ಕುಶಾಲಗೌಡ, ತಮಟೇಗೌಡ, ಸಂತೋಷ್, ಎಸ್.ಸಿ.ಗೋಪಾಲಕೃಷ್ಣ, ಪಾಲಕರಾದ ಎನ್. ಲಕ್ಷ್ಮೀದೇವಿ, ಶೋಭಾ, ವಸಂತಾ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net