ಹಿರಿಯರ ಸೌಕರ್ಯಕ್ಕೆ ದುಡಿಮೆಯ ಒಂದಿಷ್ಟು ಪಾಲು ಮುಡುಪಿಡಿ

ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಮಂಗಳವಾರ ಕಾಫಿ ಟ್ರೇರ‍್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ಧ ವೃದ್ದಾಶ್ರಮಕ್ಕೆ ಉಚಿತ ದಿನಸಿ ಪದಾರ್ಥ, ಮಿಕ್ಸರ್ ಸೇರಿದಂತೆ ಮೂಲಸೌಕರ್ಯ ವಿತರಣಾ ಕಾರ್ಯಕ್ರಮ ನಡೆಯಿತು. ಕಳವಾಸೆ ರವಿ, ಕೃಷ್ಣಮೂರ್ತಿ ರಾಜ್ ಅರಸ್, ಸಂಜಯ್, ಬಾಲರಾಜ್ ಅರಸ್, ಮನೋಹರ್ ಮತ್ತಿತರರಿದ್ದರು.
ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಮಂಗಳವಾರ ಕಾಫಿ ಟ್ರೇರ‍್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ಧ ವೃದ್ದಾಶ್ರಮಕ್ಕೆ ಉಚಿತ ದಿನಸಿ ಪದಾರ್ಥ, ಮಿಕ್ಸರ್ ಸೇರಿದಂತೆ ಮೂಲಸೌಕರ್ಯ ವಿತರಣಾ ಕಾರ್ಯಕ್ರಮ ನಡೆಯಿತು. ಕಳವಾಸೆ ರವಿ, ಕೃಷ್ಣಮೂರ್ತಿ ರಾಜ್ ಅರಸ್, ಸಂಜಯ್, ಬಾಲರಾಜ್ ಅರಸ್, ಮನೋಹರ್ ಮತ್ತಿತರರಿದ್ದರು.
Published on
ಚಿಕ್ಕಮಗಳೂರು: ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಗಮನಿಸಿರುವ ಹಿರಿಯ ನಾಗರಿಕರಿಗೆ ಪ್ರಜ್ಞಾವಂತ ನಾಗರಿಕ ಸಮಾಜವು ದುಡಿಮೆಯ ಒಂದಿಷ್ಟು ಪಾಲನ್ನು ಹಿರಿಯರ ಸೌಕರ್ಯಕ್ಕೆ ಮುಡುಪಿಡಬೇಕು ಎಂದು ಕಾಫಿ ಟ್ರೇರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಕಳವಾಸೆ ರವಿ ಹೇಳಿದರು.
ತಾಲೂಕಿನ ಇಂದಾವರ ಗ್ರಾಮದ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಮಂಗಳವಾರ ಕಾಫಿ ಟ್ರೇರ‍್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ಧ ವೃದ್ದಾಶ್ರಮಕ್ಕೆ ಉಚಿತ ದಿನಸಿ ಪದಾರ್ಥ, ಮಿಕ್ಸರ್ ಸೇರಿದಂತೆ ಮೂಲಸೌಕರ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಮಕ್ಕಳ ಯಶಸ್ಸಿನ ಹಿಂಬದಿ ಪಾಲಕರ ಶ್ರಮ ಬಹಳಷ್ಟಿದೆ. ಬಾಲ್ಯದಿಂದ ಯೌವ್ವನದವರೆಗೂ ಸು ಖ-ದುಃಖದಲ್ಲಿ ಪಾಲಕರು ಮಕ್ಕಳನ್ನು ಎಂದಿಗೂ ಕೈಬೀಡುವುದಿಲ್ಲ. ಸೋಲನುಭವಿದ ಸಂದರ್ಭದಲ್ಲೂ ಆತ್ಮವಿಶ್ವಾಸ, ಛಲ ಹಾಗೂ ಮನೋಸ್ಥೈರ್ಯ ತುಂಬುತ್ತಾರೆ ಎಂದು ಹೇಳಿದರು.
ಇಂದಿನ ಕಾಲಮಾನದಲ್ಲಿ ವಿದ್ಯಾವಂತ ಯುವಕರೇ ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂಸ್ಕೃತಿ ಹೆಚ್ಚಾಗಿದೆ. ಅಲ್ಲದೇ ಉದ್ಯೋಗ ಅಥವಾ ಮದುವೆಯ ಬಳಿಕ ಹೆತ್ತವರನ್ನು ಒಬ್ಬಂಟಿಯಾಗಿಸುವುದು ಸರಿಯಾದ ಕ್ರಮವಲ್ಲ. ಮುಂದೆ ಯೌವ್ವನದ ವಯಸ್ಸು ಕಳೆದು ಮುಪ್ಪು ಆವರಿಸುವುದನ್ನು ಮರೆಯಬಾರದು ಎಂದು ಹೇಳಿದರು.
ಭಾರತದಲ್ಲಿ ಕಾಫಿ ಬೆಳೆಯಲು ಏಳು ಕಾಫಿ ಬೀಜಗಳನ್ನು ಗಿರಿಶ್ರೇಣಿಗಳಲ್ಲಿ ನೆಟ್ಟರು ಎಂಬ ಇತಿಹಾಸವಿದೆ. ಇದು ಭಾರತದ ಪ್ರಮುಖ ಕಾಫಿ ಉತ್ಪಾದಕ ಮತ್ತು ರಫ್ತು ದೇಶಗಳಲ್ಲಿ ಒಂದಾಗಿದೆ. ಹಿಂದೆ ಕಾಫಿಯನ್ನು ಕೇವಲ ಕೃಷಿ ಉತ್ಪನ್ನವಾಗಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಕಾಫಿಯೇ ಒಂದು ಜಾಗತಿಕ ಮಟ್ಟದ ಉದ್ಯಮವಾಗಿ ಬೆಳೆದಿದೆ ಎಂದರು.
ಅಸೋಸಿಯೇಷನ್ ಉಪಾಧ್ಯಕ್ಷ ಕೃಷ್ಣಮೂರ್ತಿ ರಾಜ್ ಅರಸ್ ಮಾತನಾಡಿ, ಸಮಾಜದಿಂದ ಎಲ್ಲವನ್ನು ಪಡೆಯುವ ಮಾನವರು, ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ವರ್ಷಪೂರ್ತಿ ದುಡಿದು ಹಣ ಕೂಡಿಡುವ ಬದಲು, ಹಿರಿಯರು, ವಿಶೇಷಚೇತನರಿಗೆ ಕೈಲಾದ ಸಹಾಯಹಸ್ತ ಚಾಚುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಅನ್ನಪೂರ್ಣ ವೃದ್ಧಾಶ್ರಮ ಹಾಗೂ ಹಿರಿಯರಿಗೆ ನೆರವಾಗಲು ಮಿಕ್ಸಿ, ದಿನಸಿ ಪದಾರ್ಥ, ಚಾಪೆಯನ್ನು ಉಚಿತವಾಗಿ ನೀಡಲಾಯಿತು. ಬಳಿಕ ಅನ್ನದಾಸೋಹ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಂಜಯ್, ಖಜಾಂಚಿ ಬಾಲರಾಜ್ ಅರಸ್, ಸಂಘಟನಾ ಕಾರ್ಯದರ್ಶಿಗಳಾದ ಮನೋಹರ್, ನಹೀಂ, ನಿರ್ದೇಶಕರಾದ ಮಂಜುನಾಥ್, ಸಲೀಂ, ಪರಮೇಶ್, ಸಂಜಯ್ ಮಳಲೂರು, ವೃದ್ಧಾಶ್ರಮದ ಮುಖ್ಯಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net