ಅರ್ಧ ಎಕರೆ ಪ್ರದೇಶದಲ್ಲಿ ನಕ್ಷತ್ರ ಉದ್ಯಾನ ಅಭಿವೃದ್ಧಿ

ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಕ್ಷತ್ರ ಉದ್ಯಾನವನ್ನು ಉದ್ಘಾಟಿಸಲಾಯಿತು. ಡಾ. ಜಾನಕಿ ಸುಂದರೇಶ್,  ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ, ವಿನಯ ಕುಮಾರ್ ಶೆಟ್ಟಿ, ಪ್ರೇಮ್ ಕುಮಾರ್, ಹರೀಶ್ ಇತರರಿದ್ದರು.
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಕ್ಷತ್ರ ಉದ್ಯಾನವನ್ನು ಉದ್ಘಾಟಿಸಲಾಯಿತು. ಡಾ. ಜಾನಕಿ ಸುಂದರೇಶ್, ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ, ವಿನಯ ಕುಮಾರ್ ಶೆಟ್ಟಿ, ಪ್ರೇಮ್ ಕುಮಾರ್, ಹರೀಶ್ ಇತರರಿದ್ದರು.
Published on
ಕಳಸ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ನಕ್ಷತ್ರ ಉದ್ಯಾನವನ್ನು ಸೋಮವಾರ ಉದ್ಘಾಟಿಸಲಾಯಿತು. ಕಾಲೇಜಿನ ಆವರಣದಲ್ಲಿ ಉದ್ಯಾನಕ್ಕಾಗಿ ಮೀಸಲಿರಿಸಲಾಗಿದ್ದ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಈ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಪಶುಸಂಗೋಪನಾ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಡಾ. ಜಾನಕಿ ಸುಂದರೇಶ್ ಅವರ ಪರಿಕಲ್ಪನೆಯಂತೆ ಈ ಯೋಜನೆ ರೂಪುಗೊಂಡಿದೆ. 
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ಮಾತನಾಡಿ, ಡಾ.ಜಾನಕಿ ಸುಂದರೇಶ್ ಅವರ ವಿನೂತನ ಹಾಗೂ ವೈಜ್ಞಾನಿಕ ಪರಿಕಲ್ಪನೆಯು ಪರಿಸರ ಸಂರಕ್ಷಣೆ ಮತ್ತು ಜನಜಾಗೃತಿಗೆ ಪೂರಕವಾಗಿದೆ. ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಉದ್ಯಾನ ಇನ್ನಷ್ಟು ಅಭಿವೃದ್ಧಿಪಡಿಸಲು ಕಾಲೇಜು ಅಭಿವೃದ್ಧಿ ಸಮಿತಿಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಉದ್ಯಾನದ ಪರಿಕಲ್ಪನೆ ಕುರಿತು ಮಾತನಾಡಿದ ಡಾ. ಜಾನಕಿ ಸುಂದರೇಶ್, ಔಷಧೀಯ ಗುಣಗಳನ್ನು ಹೊಂದಿರುವ ಹಾಗೂ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ 27 ನಕ್ಷತ್ರಗಳಿಗೆ ಅನುಗುಣವಾಗಿ 27 ಜಾತಿಯ ಸಸಿಗಳನ್ನು ಉದ್ಯಾನದಲ್ಲಿ ನೆಡಲಾಗಿದೆ ಎಂದು ತಿಳಿಸಿದರು. 
ಈ ಮರಗಳು ಬೆಳೆಯುವುದರಿಂದ ನೆರಳು ಹಾಗೂ ಪರಿಸರ ಸಮತೋಲನಕ್ಕೆ ನೆರವಾಗುವುದರ ಜತೆಗೆ ಆಯಾ ನಕ್ಷತ್ರದ ವ್ಯಕ್ತಿಗಳು ತಮ್ಮ ನಕ್ಷತ್ರಕ್ಕೆ ಸಂಬಂಧಿಸಿದ ಮರದ ನೆರಳಿನಲ್ಲಿ ಕಾಲ ಕಳೆಯುವುದರಿಂದ ಮಾನಸಿಕ ಹಾಗೂ ದೈಹಿಕ ನೆಮ್ಮದಿ ದೊರೆಯುತ್ತದೆ ಎಂಬುದು ಭಾರತೀಯ ಪ್ರಾಚೀನ ಶಾಸ್ತ್ರಗಳ ನಂಬಿಕೆಯಾಗಿದೆ. ಸ್ಥಳೀಯರು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ವಿನಯ ಕುಮಾರ್ ಶೆಟ್ಟಿ ಮಾತನಾಡಿ, ಡಾ. ಜಾನಕಿ ಸುಂದರೇಶ್ ಅವರ ಪ್ರಸ್ತಾವನೆಗೆ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ತಕ್ಷಣವೇ ಒಪ್ಪಿಗೆ ನೀಡಿ ಅಗತ್ಯ ಸಹಕಾರ ನೀಡಿದ್ದರಿಂದ ಉದ್ಯಾನವನ್ನು ವೈಜ್ಞಾನಿಕವಾಗಿ ರೂಪಿಸಲು ಸಾಧ್ಯವಾಯಿತು ಎಂದು ಹೇಳಿದರು. 
ಕಾಲೇಜಿನ ಯೋಗ ಶಿಕ್ಷಕರಾದ ಪ್ರೇಮ್ ಕುಮಾರ್, ಅರಣ್ಯ ಇಲಾಖೆಯ ಡಿಆರ್‌ಎ್ಒ ಹರೀಶ್, ಕಸಾಪ ಅಧ್ಯಕ್ಷ ಸತೀಶ್ಚಂದ್ರ, ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ,  ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್, ಕಸಾಪ ಮಹಿಳಾ ಘಟಕ ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಂ, ಲೇಖಕೀಯರ ಸಂಘದ ಅಧ್ಯಕ್ಷೆ ಗೀತಾ ಮಕ್ಕಿಮನೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net