ಸ್ಥಳೀಯ ಭತ್ತದ ಬೆಳೆಗಾರ ಅರುಣ್ಕುಮಾರ್ ಮಾತನಾಡಿ, ಭತ್ತದ ಬೆಳೆ ಹಾಗೂ ತಳಿಗಳಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿದೆ. ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಕಾಲಕಾಲಕ್ಕೆ ಮಾಡುತ್ತಿದೆ. ಮೂಲ ಭತ್ತದ ಸಂತತಿಗಳನ್ನು ನಾವು ಮರೆಯಬಾರದು. ಹಸಿರುಕ್ರಾಂತಿ ಪ್ರಾರಂಭವಾದ ಮೇಲೆ ಸಾವಯುವ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರ, ಕೀಟನಾಶಕ, ರೋಗನಾಶಕಗಳು ಬಂದಿದೆ ಎಂದರು.