ಕಡೂರು ಬರ ತಾಲೂಕು ಎಂದು ಘೋಷಿಸಿ (kadur)

 ಪರ್ವತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ಉದ್ಘಾಟಿಸಿದರು. ಮಹೇಶ್ವರಪ್ಪ, ಯದುರಾಜ್, ಗೌರಮ್ಮ ಇತರರಿದ್ದರು.
ಪರ್ವತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ಉದ್ಘಾಟಿಸಿದರು. ಮಹೇಶ್ವರಪ್ಪ, ಯದುರಾಜ್, ಗೌರಮ್ಮ ಇತರರಿದ್ದರು.
Published on
ಪಂಚನಹಳ್ಳಿ: ಕಡೂರು ತಾಲೂಕಿನಲ್ಲಿ ಮಳೆಯಿಲ್ಲದೆ ಸಂಪೂರ್ಣ ಬರಗಾಲ ಆವರಿಸಿದ್ದು, ಸರ್ಕಾರ ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ಒತ್ತಾಯಿಸಿದರು. 
ಪರ್ವತನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬರಗಾಲದಲ್ಲಿ ಹೈನುಗಾರಿಕೆ ರೈತರ ಕೈಹಿಡಿದಿದೆ. ರೈತರ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ಗ್ರಾಮೀಣ ಭಾಗಗಳಲ್ಲಿ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿರುವುದಕ್ಕೆ ಹೈನುಗಾರಿಕೆ ಪ್ರಮುಖವಾಗಿದೆ. ಅನೇಕ ಕುಟುಂಬಗಳಲ್ಲಿ ಮಹಿಳೆಯರು ಹೈನುಗಾರಿಕೆಯಿಂದ ಲಾಭಗಳಿಸಿ ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು. 
ವಿಸ್ತರಣಾಧಿಕಾರಿ ಯದುರಾಜ್ ಮಾತನಾಡಿ, ಸಹಕಾರ ಸಂಘಗಳು ಬಲಿಷ್ಠವಾಗಲು ರೈತರ ಶ್ರಮ ಕಾರಣ. ರೈತರು ಗುಣಮಟ್ಟದ ಹಾಲು ಪೂರೈಸುವುದರ ಜತೆಗೆ ಜಾನುವಾರುಗಳ ಪೋಷಣೆಗೆ ಹೆಚ್ಚು ಗಮನಹರಿಸಬೇಕು. ನಂದಿನಿ ಉತ್ಪನ್ನಗಳನ್ನು ಕ್ರಮಬದ್ಧವಾಗಿ ಬಳಸಿದಾಗ ರಾಸುಗಳ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು. 
ಸಂಘದ ಅಧ್ಯಕ್ಷ ಮಹೇಶ್ವರಪ್ಪ ಮಾತನಾಡಿ, ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರೈತರ ಪರಿಶ್ರಮದಿಂದಲೇ ಸಂಘದ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ 8.16 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಕಾರ್ಯದರ್ಶಿ ಪಿ.ಕೆ.ಮಲ್ಲಿಕಾರ್ಜುನ್ ತಿಳಿಸಿದರು. 
ಸಂಘದ ಉಪಾಧ್ಯಕ್ಷೆ ಗೌರಮ್ಮ, ನಿರ್ದೇಶಕರಾದ ಅಶೋಕ್, ರಾಜಪ್ಪ, ಪುರದಪ್ಪ, ಸುರೇಶ್, ಮಂಜಪ್ಪ, ರೂಪ್ಲ ನಾಯ್ಕ, ಗೌರಮ್ಮ, ಗ್ರಾಮಸ್ಥರಾದ ದರ್ಶನ್, ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net