ಬಾಂಧವ್ಯ ಬೆಸೆಯುವ ಕ್ರೀಡೆ ಕ್ರಿಕೆಟ್

ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಹೆಬ್ಬಾರ್ ಕ್ರಿಕೆಟ್ ಲೀಗ್ ಶ್ರೀಪಾದ ಕಪ್ ಪಂದ್ಯಾವಳಿಯನ್ನು ಕೊಪ್ಪ ಯಡಗೆರೆ ಸೌಹಾರ್ದ ಕ್ರೆಡಿಟ್ ಕೋಆಪರೇಟೀವ್ ಅಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಉದ್ಘಾಟಿಸಿದರು. ವೈ.ಎಸ್.ರಾಮಚಂದ್ರ, ಕೆ.ಆರ್.ಶಿವಕುಮಾರ್, ಎ.ವಿ.ಪ್ರಶಾಂತ್, ಚರಣ ಹೆಬ್ಬಾರ, ಎ.ಎಸ್.ವೆಂಕಟರಮಣ, ಕೆ.ವಿ.ಪ್ರಭಾಕರ ಇದ್ದರು.

Published on
ಎನ್.ಆರ್.ಪುರ: ಕ್ರಿಕೆಟ್ ಕೇವಲ ಆಟವಾಗಿ ಉಳಿಯದೆ ಯುವಜನರಲ್ಲಿ ಬಾಂಧವ್ಯ ಬೆಸೆಯುವ ಕ್ರೀಡೆಯಾಗಿದೆ ಎಂದು ಕೊಪ್ಪ ಯಡಗೆರೆ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಅಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಹೇಳಿದರು.
ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆ ಆಟದ ಮೈದಾನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕ ಹಾಗೂ ಯುವ ಹೆಬ್ಬಾರ ಬಳಗದ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ 5ನೇ ವಷರ್ದ ಎರಡು ದಿನಗಳ ಹೆಬ್ಬಾರ್ ಕ್ರಿಕೆಟ್ ಲೀಗ್ ಶ್ರೀಪಾದ ಕಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. 
ಹೆಬ್ಬಾರ ಬ್ರಾಹ್ಮಣ ಮಹಾಸಭಾದ ಎನ್.ಆರ್.ಪುರ ಘಟಕದವರು 5 ವರ್ಷದಿಂದಲೂ ನಿರಂತರವಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ವಷರ್ಗಳಲ್ಲೂ ಯುವಕರು ಇದೇ ರೀತಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ವೃತ್ತಿಪರ ನಿರ್ದೇಶಕ ಕೆ.ಆರ್.ಶಿವಕುಮಾರ್ ಮಾತನಾಡಿ, ಯುವಜನರು ಕ್ರೀಡಾಕೂಟದ ಜತೆಗೆ ಹೆಬ್ಬಾರ ಸಮಾಜದ ಮುಖ್ಯ ಕಾರ್ಯಕ್ರಮವಾದ ಗುರುದರ್ಶನ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಎಂದರು.
ಪಂದ್ಯಾವಳಿಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಅಧ್ಯಕ್ಷತೆಯನ್ನು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ್ ವಹಿಸಿದ್ದರು. ಸಮಾರಂಭದಲ್ಲಿ ಹೆಬ್ಬಾರ ಬ್ರಾಹ್ಮಣ ಮಹಾಸಭಾದ ಕೇಂದ್ರೀಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಚರಣಹೆಬ್ಬಾರ, ಎನ್.ಆರ್.ಪುರ ಘಟಕದ ಗೌರವಾಧ್ಯಕ್ಷ ಎ.ಎಸ್.ವೆಂಕಟರಮಣ, ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಎನ್.ಆರ್.ಪುರ ಯುವ ಬಳಗದ ಅಧ್ಯಕ್ಷ ವೈ.ಎಂ.ಮಧು, ಯುವ ಬಳಗದ ಕಾರ್ಯದರ್ಶಿ ಕೆ.ಎಂ.ವಿಕಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net