ಇದೇ ಮಾದರಿಯಲ್ಲಿ ಕೊಪ್ಪ ತಾಲೂಕಿನ ಉಪವಿಭಾಗದ ವ್ಯಾಪ್ತಿಯಲ್ಲೂ ಬೋರ್‌ವೆಲ್ ಕಾಮಗಾರಿಗಳ ಒಪ್ಪಂದಕ್ಕಾಗಿ ನಕಲಿ ಛಾಪಾ ಕಾಗದಗಳನ್ನು ಬಳಸಿ ಸರ್ಕಾರಕ್ಕೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಎನ್.ಆರ್. ಪುರದ ಎಂ/ಎಸ್ ಎಸ್.ಕೆ.ಪಿ ಕನ್ಸ್ಟ್ರಕ್ಷನ್ ಅಂಡ್ ಬೋರ್‌ವೆಲ್ಸ್ನ ದಸ್ತಗೀರ್, ಕೊಪ್ಪಳ ಜಿಲ್ಲೆ ಕುಷ್ಟಗಿಯ ದೇವೇಂದ್ರ ಪಾಟೀಲ್ ಮತ್ತು ರಾಯಚೂರು ಜಿಲ್ಲೆ ಸಿಂಧನೂರಿನ ನಾಗರಾಜು ಎಂಬ ಮೂವರು ಗುತ್ತಿಗೆದಾರರು ಎನ್.ಆರ್. ಪುರದ 'ಆಯಿರಾ ಡಿಜಿಟಲ್' ಸಂಸ್ಥೆಯಲ್ಲಿ ನಕಲಿ ಒಪ್ಪಂದ ಪತ್ರಗಳನ್ನು ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಲಾಖೆಗೆ ಸಲ್ಲಿಸಿದ್ದರು. ಚಿಕ್ಕಮಗಳೂರು ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ಗಳ ಸೂಚನೆಯ ಮೇರೆಗೆ ಕೊಪ್ಪ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪ್ರಭಾರ) ಸುನೀಲ್ ಕುಮಾರ್ ಅವರು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಗುತ್ತಿಗೆದಾರರು ಹಾಗೂ ನಕಲಿ ದಾಖಲೆ ಸೃಷ್ಟಿಸಿಕೊಟ್ಟ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದೆ.