ತಪ್ಪಾಗಿರುವ ಬೆಳೆ ಸಮೀಕ್ಷೆ ಸರ್ವೇ ಸರಿಪಡಿಸಿ

ಬೆಳೆ ಸಮೀಕ್ಷೆ ಸರ್ವೇ ಕಾರ್ಯ ಸರಿಪಡಿಸಿಕೊಡುವಂತೆ ಒತ್ತಾಯಿಸಿ ಬಿ.ಕೋಡಿಹಳ್ಳಿ ಗ್ರಾಮದ ರೈತರು ಒತ್ತಾಯಿಸಿದರು
ಬೆಳೆ ಸಮೀಕ್ಷೆ ಸರ್ವೇ ಕಾರ್ಯ ಸರಿಪಡಿಸಿಕೊಡುವಂತೆ ಒತ್ತಾಯಿಸಿ ಬಿ.ಕೋಡಿಹಳ್ಳಿ ಗ್ರಾಮದ ರೈತರು ಒತ್ತಾಯಿಸಿದರು
Published on
ಕಡೂರು: ತಾಲೂಕಿನ ಬೀರೂರು ಹೋಬಳಿಯ ಬಿ.ಕೋಡಿಹಳ್ಳಿ ಗ್ರಾಮದ ರೈತರ ಬಹುತೇಕ ಅಡಿಕೆ ತೋಟಗಳಿಗೆ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಖಾಲಿ ಜಮೀನು ಎಂದು ತಪ್ಪಾಗಿ ನಮೂದು ಮಾಡಿರುವುದರಿಂದ ಫಸಲ್ ಭಿಮಾ ಯೋಜನೆಯಡಿ ನಮ್ಮ ಬೆಳೆಗಳಿಗೆ ವಿಮಾ ಕಂತು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಬೆಳೆ ಸಮೀಕ್ಷೆ ಸಮಸ್ಯೆ ಸರಿಪಡಿಸಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬಿ.ಕೋಡಿಹಳ್ಳಿ ಗ್ರಾಮದ ಮಂಜಪ್ಪ ಮಾತನಾಡಿ, ಗ್ರಾಮದಲ್ಲಿರುವ ಸುಮಾರು 40 ಜನ ರೈತರ ಬಹುತೇಕ ಜಮೀನುಗಳಲ್ಲಿ ಗೆದ್ದಲು ಜಮೀನು ಎಂದು ಬೆಳೆಸಮೀಕ್ಷೆ ಮಾಡಲಾಗಿದೆ. ಆದರೆ ವಾಸ್ತವವಾಗಿ ಅಡಿಕೆ ತೋಟಗಳನ್ನು ಮಾಡಲಾಗಿದೆ. ಬೆಳೆ ಸಮೀಕ್ಷೆದಾರರು ಸರಿಯಾದ ರೀತಿಯಲ್ಲಿ ಸರ್ವೇ ನಡೆಸದೆ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ ಎಂಬಂತೆ ತಪ್ಪಾಗಿ ನಮೂದಿಸಿರುವುದು ಪಹಣಿಯಲ್ಲಿ ಬೆಳೆ ಕಾಲಂನಲ್ಲಿ ಬೆದ್ದಲು ಜಮೀನು ಎಂದು ತೋರಿಸುತ್ತಿದೆ. ಈಗಾಗಲೇ ಬರಕ್ಕೆ ತುತ್ತಾಗಿರುವುದರಿಂದ ಸರ್ಕಾರ ನೀಡುವ ಪರಿಹಾರ ಸೇರಿದಂತೆ ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಗ್ರಾಮದಲ್ಲಿನ ಪರಿಶಿಷ್ಟ ವರ್ಗದ ಕೊರಚ-ಕೊರಮ ಸಮುದಾಯದ ರೈತರಿಗೆ ಬೆಳೆ ವಿಮೆ ಮಾಡಿಸಿಕೊಳ್ಳಲು ಸಮಯದ ಕಾಲಾವಕಾಶ ಕಡಿಮೆ ಇದ್ದು ಕೂಡಲೇ ತಪ್ಪಾಗಿ ನಮೂದಾಗಿರುವ ಬೆಳೆ ಸಮೀಕ್ಷೆ ಸರ್ವೇಯನ್ನು ಸರಿಪಡಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಖಾಸಗಿ ಏಜೆನ್ಸಿ ಮೂಲಕ ಸರ್ವೇ ಕಾರ್ಯ ಮಾಡಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಕೊರಚ-ಕೊರಮ ಸಮಾಜದ ಮುಖಂಡರಾದ ಟಿ.ಮೂರ್ತಿ, ಗಿರೀಶ್, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಧರಣಿಕುಮಾರ್, ಶ್ರೀನಿವಾಸ್, ಪ್ರದೀಪ್, ರಮೇಶ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net