ಕಾಡಾನೆ ಹಾವಳಿಯನ್ನು ನಿಯಂತ್ರಿಸಿ

ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಪುರದಲ್ಲಿ ಕಾರ್ಮಿಕನ ಮೇಲೆ ಆನೆ ದಾಳಿ ನಡೆದ ಪ್ರಕರಣ ಖಂಡಿಸಿ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆಯಿಂದ ಸಭೆ ನಡೆಸಲಾಯಿತು. ಚಂದ್ರಶೇಖರ್ ರೈ, ನವೀನ್, ಸಂಪತ್, ಶಿವಶಂಕರ್, ರಾಜೇಶ್, ಪ್ರೇಮೇಶ್, ಸುರೇಶ್ ಇದ್ದರು.
ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಪುರದಲ್ಲಿ ಕಾರ್ಮಿಕನ ಮೇಲೆ ಆನೆ ದಾಳಿ ನಡೆದ ಪ್ರಕರಣ ಖಂಡಿಸಿ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆಯಿಂದ ಸಭೆ ನಡೆಸಲಾಯಿತು. ಚಂದ್ರಶೇಖರ್ ರೈ, ನವೀನ್, ಸಂಪತ್, ಶಿವಶಂಕರ್, ರಾಜೇಶ್, ಪ್ರೇಮೇಶ್, ಸುರೇಶ್ ಇದ್ದರು.
Published on
ಬಾಳೆಹೊನ್ನೂರು: ಮಲೆನಾಡು ಭಾಗದಲ್ಲಿ ನಿರಂತರವಾಗಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಕೂಡಲೇ ಎಲಿೆಂಟ್ ಟಾಸ್ಕ್‌ಫೋರ್ಸ್(ಇಟಿಎ್) ರಚನೆ ಮಾಡಬೇಕು. ಇಲ್ಲದಿದ್ದಲ್ಲಿ ಜನರ ಹೋರಾಟ ಎದುರಿಸಬೇಕು ಎಂದು ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಸದಸ್ಯ ಚಂದ್ರಶೇಖರ್ ರೈ ಹೇಳಿದ್ದಾರೆ.
ಖಾಂಡ್ಯ ಹೋಬಳಿಯ ಪುರ ಗ್ರಾಮದಲ್ಲಿ ಭಾನುವಾರ ಕಾರ್ಮಿಕನ ಮೇಲೆ ಆನೆ ದಾಳಿ ನಡೆದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆಯ ಸಭೆಯಲ್ಲಿ ಮಾತನಾಡಿದರು. 
ಖಾಂಡ್ಯ ಹೋಬಳಿಯಲ್ಲಿ ಪದೇಪದೆ ಆನೆ ದಾಳಿ ನಡೆಯುತ್ತಿದ್ದು ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಉಗ್ರ ಹೋರಾಟಕ್ಕೆ ಸಮಿತಿ ನಿರ್ಧರಿಸಿದೆ. ಮಾನವರ ಮೇಲೆ ಆನೆ ದಾಳಿ ಪ್ರಕರಣಗಳು ನಡೆಯದಂತೆ ಜಿಲ್ಲಾಡಳಿತ, ಸರ್ಕಾರ ಹಾಗೂ ಅರಣ್ಯ ಸಚಿವರು ಕೂಡಲೇ ಎಚ್ಚರವಹಿಸಬೇಕು. ಸರ್ಕಾರ ಕೂಡಲೇ ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಇಟಿಎ್ ರಚನೆ ಮಾಡಬೇಕು. ಬೇಡಿಕೆ ಶೀಘ್ರ ಈಡೇರಿಸಬೇಕು. ಇಲ್ಲವಾದಲ್ಲಿ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ನವೀನ್ ಕರಗಣೆ, ಸದಸ್ಯರಾದ ಶಿವಶಂಕರ್. ರಾಜೇಶ್, ಪ್ರೇಮೇಶ್, ಸುರೇಶ್ ಕೋಟಿಯಾನ್, ಜೋಯಿ, ಪ್ರದೀಪ್, ಅಭಿ, ಸುನೀಲ್, ಸುಧಾಕರ್, ಸುಬ್ಬು, ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net