ಎನ್.ಆರ್.ಪುರ ತಾಪಂನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು. ಚಂದ್ರಮ್ಮ , ಎಚ್.ಡಿ.ನವೀನ್‌ಕುಮಾರ್, ಇಂದಿರಾನಗರ ರಘು, ಅಪೂರ್ವಾ, ನಿತ್ಯಾನಂದ, ಬೇಸಿಲ್, ಟಿ.ಟಿ.ಇಸ್ಮಾಯಿಲ್, ಜಯರಾಂ, ನಾಗರಾಜ್, ಸೈಯದ್ ಶಫೀರ್‌ಅಹಮ್ಮದ್ ಇತರರಿದ್ದರು.
ಎನ್.ಆರ್.ಪುರ: ಬಾಳೆಹೊನ್ನೂರು ಹೋಬಳಿ ಹಾಗೂ ಮುತ್ತಿನಕೊಪ್ಪ ಕಸಬಾ ಹೋಬಳಿಗಳಲ್ಲಿ ಗ್ಯಾರಂಟಿ ಯೋಜನೆಯ ಸಮಾವೇಶಗಳನ್ನು ಆಯೋಜಿಸಲು ಜಿಲ್ಲಾ ಮಟ್ಟದ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಹೇಳಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಸಮಾವೇಶಕ್ಕೆ ಸಜ್ಜಾಗಿದೆ. ನಂತರ ಶಾಸಕರ ನೇತೃತ್ವದಲ್ಲಿ ಕ್ಷೇತ್ರ ಮಟ್ಟದ ಸಮಾವೇಶವೂ ನಡೆಯಲಿದೆ. ಅದಕ್ಕೂ ಮುನ್ನ ಬಾಳೆಹೊನ್ನೂರು ಹೋಬಳಿ ಸಮಾವೇಶವನ್ನು ಬಾಳೆಹೊನ್ನೂರು ಸಮುದಾಯ ಭವನದಲ್ಲಿ ಹಾಗೂ ಮುತ್ತಿನಕೊಪ್ಪ ಕಸಬಾ ಹೋಬಳಿ ಸಮಾವೇಶವನ್ನು ಎನ್.ಆರ್.ಪುರದ ಗುರುಭವನದಲ್ಲಿ ಆಯೋಜಿಸಲಾಗುವುದು. ಎಲ್ಲರೂ ಸಹಕರಿಸಿ ಹೋಬಳಿ ಮಟ್ಟದ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು.
ಶೀಘ್ರ ದಿನಾಂಕ ನಿಗದಿಪಡಿಸಿ ಮತ್ತೊಂದು ಸಭೆ ಕರೆಯಲಾಗುವುದು. ತಾಲೂಕಿನಲ್ಲಿ ಒಟ್ಟು 137 ಅಂಗನವಾಡಿಗಳಿವೆ. ಬಾಳೆಹೊನ್ನೂರು ಹೋಬಳಿಯಲ್ಲಿ 73 ಹಾಗೂ ಮುತ್ತಿನಕೊಪ್ಪ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 64 ಅಂಗನವಾಡಿಗಳಿವೆ. ಈ ಕೇಂದ್ರಗಳ ವ್ಯಾಪ್ತಿಯಿಂದ ಕನಿಷ್ಠ 10 ಲಾನುಭವಿಗಳು ಬರುವಂತೆ ಸಂಬಂಧಪಟ್ಟ ಸಿಡಿಪಿಒ ಇಲಾಖೆಯವರು ನೋಡಿಕೊಳ್ಳಬೇಕು. ಪಿಡಿಒಗಳು ಆಯಾ ಗ್ರಾಪಂ ವ್ಯಾಪ್ತಿಯ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರ ಸಭೆ ಕರೆದು ಸಮಾವೇಶದ ಬಗ್ಗೆ ಚರ್ಚಿಸಿ ಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸುವಂತೆ ಕ್ರಮವಹಿಸಲು ತಿಳಿಸಬೇಕು ಎಂದರು.
ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಬಿಪಿಎಲ್ ಕಾರ್ಡ್ ಹೆಸರು, ವಿಳಾಸ ತಿದ್ದುಪಡಿಗೆ ಮಾ.31 ಅಂತಿಮ ದಿನಾಂಕವಾಗಿರುತ್ತದೆ. ಮಾ.31ರೊಳಗೆ ಕಾರ್ಡ್‌ನ ಮಾರ್ಪಾಡುಗಳನ್ನು, ತಿದ್ದುಪಡಿಗಳನ್ನು ಲಾನುಭವಿಗಳು ಮಾಡಿಕೊಳ್ಳ್ಳಬೇಕು. ಹೊಸ ಬಿಪಿಎಲ್ ಕಾರ್ಡ್‌ಗಳನ್ನು ಸೀನಿಯಾರಿಟಿ ಪ್ರಕಾರವೇ ವಿತರಿಸಲಾಗುವುದು. ತಾಲೂಕಿನಲ್ಲಿ ಮರಣ ಹೊಂದಿದವರ ಪಟ್ಟಿ ಬಂದಿದ್ದು ಅದರಲ್ಲಿ ಮನೆಯ ಕುಟುಂಬದ ಮುಖ್ಯಸ್ಥ ಮಹಿಳೆಯರೂ ಸೇರಿದ್ದಾರೆ. ಅಂತಹವರು ಗೃಹಲಕ್ಷ್ಮಿಯೋಜನೆಯ ಲಾನುಭವಿಗಳಾಗಿದ್ದಲ್ಲಿ ಗೃಹಲಕ್ಷ್ಮಿ ಯೋಜನೆಯ ಸವಲತ್ತುಗಳನ್ನು ಪಡೆಯಲು ಅತ್ತೆಯಿಂದ ಸೊಸೆಗೆ, ತಾಯಿಯಿಂದ ಮಗಳಿಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷೆ ಚಂದ್ರಮ್ಮ, ಸಮಿತಿ ಸದಸ್ಯರಾದ ಅಪೂರ್ವಾ, ಬೇಸಿಲ್, ಜಯರಾಂ, ನಾಗರಾಜ್, ಸೈಯದ್‌ಶಫೀರ್‌ಅಹಮ್ಮದ್, ಬಿಇಒ ಶಬಾನಾ ಅಂಜುಮ್, ಬಿಸಿಎಂ ಇಲಾಖೆ ಅಧಿಕಾರಿ ಧರ್ಮರಾಜ್, ಸಾಗರ್, ಸುನೀಲ್ ಮತ್ತು ಪಿಡಿಒಗಳಿದ್ದರು.