21ಕ್ಕೆ ಕ್ರಿಸ್‌ಮಸ್ ಸೌಹಾರ್ದ ನಡೆ

ಕೊಪ್ಪದ ನಿತ್ಯಾಧಾರ ಮಾತೆ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಸೌಹಾರ್ದ ನಡೆ ಮತ್ತು ಸೌಹಾರ್ದ ವೇದಿಕೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ಗುರು ಪೌಲ್ ಡಿಸೋಜ, ಗುರು ಮಾರ್ಸೆಲ್ ಪಿಂಟೋ, ಧರ್ಮಗುರುಗಳಾದ ಮೆಲ್ವಿನಬ್ ಟೆಲ್ಲಿಸ್, ಕೀರ್ತಿ ಕಿರಣ್ ಇದ್ದರು.
ಕೊಪ್ಪದ ನಿತ್ಯಾಧಾರ ಮಾತೆ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಸೌಹಾರ್ದ ನಡೆ ಮತ್ತು ಸೌಹಾರ್ದ ವೇದಿಕೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ಗುರು ಪೌಲ್ ಡಿಸೋಜ, ಗುರು ಮಾರ್ಸೆಲ್ ಪಿಂಟೋ, ಧರ್ಮಗುರುಗಳಾದ ಮೆಲ್ವಿನಬ್ ಟೆಲ್ಲಿಸ್, ಕೀರ್ತಿ ಕಿರಣ್ ಇದ್ದರು.
Published on
ಕೊಪ್ಪ:  ಯೇಸುಕ್ರಿಸ್ತ ಜನನದ ಜ್ಯೂಬಿಲಿ ವರ್ಷವಾದ ಹಿನ್ನಲೆಯಲ್ಲಿ ಡಿ.21ರಂದು ಕ್ರಿಸ್‌ಮಸ್ ಸೌಹಾರ್ದ ನಡೆ ಮತ್ತು ಸೌಹಾರ್ದ ವೇದಿಕೆ ಕಾರ್ಯಕ್ರಮವನ್ನು ಕೊಪ್ಪದ ಅಂಚೆ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಾಳೆಹೊನ್ನೂರು ವಲಯದ ಪ್ರಧಾನ ಗುರುಗಳಾದ ಪೌಲ್ ಡಿಸೋಜ ತಿಳಿಸಿದ್ದಾರೆ.
ಯೇಸುಕ್ರಿಸ್ತ ಜನಿಸಿ 2025 ವರ್ಷವಾದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರದ ಕಾರ್ಯ ವ್ಯಾಪ್ತಿಯಲ್ಲಿ ಬರುವ ಮೂರು ವಲಯಗಳಲ್ಲಿ ಒಂದಾದ ಬಾಳೆಹೊನ್ನೂರು ವಲಯಕ್ಕೆ ಸೇರಿದ ಕೊಪ್ಪದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಲಯದ ಸುಮಾರು 14 ಧರ್ಮ ಕೇಂದ್ರದ (ಚರ್ಚ್‌ಗಳ) ಗುರುಗಳು ಭಾಗಿಯಾಗಲಿದ್ದಾರೆ. ಚಿಕ್ಕಮಗಳೂರು ಧರ್ಮಕ್ಷೇತ್ರದ ಡಾ.ಟಿ. ಅಂತೋಣಿಸ್ವಾಮಿ, ಶೃಂಗೇರಿ ಅದಿಚುಂಚನಗಿರಿ ಮಠದ ಶ್ರೀ ಗುಣನಾಥ ಸ್ವಾಮೀಜಿ ಹಾಗೂ ಮಂಗಳೂರಿನ ಮುಸ್ಲಿಂ ಮುಖಂಡರಾದ ಮೊಹಮ್ಮದ್ ಕುಂಇ ಭಾಗವಹಿಸಿ ಸೌಹಾದರ್ತೆಯ ಸಂದೇಶವನ್ನು ನೀಡಲಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಪ್ಪ ಮೇಲಿನಪೇಟೆಯ ಕುವೆಂಪು ವೃತ್ತದಿಂದ ಡಿ.21ರ ಮಧ್ಯಾಹ್ನ 3ಕ್ಕೆ ಸೌಹಾರ್ದ ನಡಿಗೆ ಆರಂಭಗೊಳ್ಳಲಿದೆ. ರ‌್ಯಾಲಿಯಲ್ಲಿ ಯೇಸುಕ್ರಿಸ್ತರ ಜನನ, ಜೀವನ ಹಾಗೂ ತ್ಯಾಗವನ್ನು ನೆನಪಿಸುವ ಸ್ತಬ್ದ ಚಿತ್ರಗಳೊಂದಿಗೆ ಪ್ರಾರ್ಥನಾ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾಳೆಹೊನ್ನೂರು ವಲಯ ಕಾರ್ಯದರ್ಶಿಗಳಾದ ಗುರು ಮಾರ್ಸೆಲ್ ಪಿಂಟೋ, ಕೊಪ್ಪ ನಿತ್ಯಾಧಾರ ಮಾತೆಯ ಧರ್ಮಗುರುಗಳಾದ ಮೆಲ್ವಿನಬ್ ಟೆಲ್ಲಿಸ್, ನಿತ್ಯಾಧಾರ ಮಾತೆಯ ಸಹಾಯಕ ಧರ್ಮಗುರುಗಳಾದ ಕೀರ್ತಿ ಕಿರಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net