ದೇವೇಗೌಡರಿಗೆ ಬೆನ್ನೆಲುಬಾಗಿದ್ದ ಚೆನ್ನಮ್ಮ

ಬಾಳೆಹೊನ್ನೂರು ಜೆಡಿಎಸ್ ಕಚೇರಿಯಲ್ಲಿ ಚೆನ್ನಮ್ಮ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕೆ.ಎನ್.ಮರಿಗೌಡ, ಕೆ.ಟಿ.ಗೋವಿಂದೇಗೌಡ, ಅತಿಶಯ್, ಕೆ.ಕೆ.ವೆಂಕಟೇಶ್, ಶಿವಶಂಕರ್ ಮತ್ತಿತರರಿದ್ದರು.
ಬಾಳೆಹೊನ್ನೂರು ಜೆಡಿಎಸ್ ಕಚೇರಿಯಲ್ಲಿ ಚೆನ್ನಮ್ಮ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕೆ.ಎನ್.ಮರಿಗೌಡ, ಕೆ.ಟಿ.ಗೋವಿಂದೇಗೌಡ, ಅತಿಶಯ್, ಕೆ.ಕೆ.ವೆಂಕಟೇಶ್, ಶಿವಶಂಕರ್ ಮತ್ತಿತರರಿದ್ದರು.
Published on
ಬಾಳೆಹೊನ್ನೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಧೀಮಂತ ಮಹಿಳೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕಾರಣದ ಬೆಳವಣಿಗೆ, ಅವರ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಚೆನ್ನಮ್ಮ ಅವರು ಎಲ್ಲಿಯೂ ಕೂಡ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದೆ ಹಿಂದಿನಿಂದಲೇ ಅವರ ಎಲ್ಲ ಅಭಿವೃದ್ಧಿಗೆ ಸಹಕರಿಸಿದ್ದರು. ಅವರ ನಿಧನ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದರು.
ಜೆಡಿಎಸ್ ಮುಖಂಡ ಕೆ.ಎನ್.ಮರಿಗೌಡ, ಪ್ರಮುಖರಾದ ಕೆ.ಟಿ.ಗೋವಿಂದೇಗೌಡ, ಅತಿಶಯ್, ಕೆ.ಕೆ.ವೆಂಕಟೇಶ್, ಶಿವಶಂಕರ್, ಯು.ಅಶ್ರ್, ಸುಧಾ ಪೈ, ಬಿಜೆಪಿ ಮುಖಂಡರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ಭಾಸ್ಕರ್ ವೆನಿಲ್ಲಾ, ಕೆ.ಟಿ.ವೆಂಕಟೇಶ್, ಪ್ರಭಾಕರ್ ಪ್ರಣಸ್ವಿ, ಪ್ರದೀಪ್ ಕಿಚ್ಚಬ್ಬಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net