ಪಟ್ಟಣದ ಛತ್ರ ಮೈದಾನ ಬಡಾವಣೆಯಲ್ಲಿ ಬಾಯಿ ತೆರೆದುಕೊಂಡಿದ್ದ ಗುಂಡಿಯನ್ನು ಕಾಂಕ್ರೀಟ್‌ನಿಂದ ಮುಚ್ಚಲಾಗಿದೆ. ಉಳಿದಂತೆ ಮಾರ್ಕೆಟ್ ರಸ್ತೆ, ಪಿಟಿ ರಸ್ತೆ, ಕುರುಕಮಕ್ಕಿ ಬಡಾವಣೆ, ದೊಡ್ಡಿಬೀದಿ, ಜೆ.ಎಂ.ರಸ್ತೆ, ಎಂ.ಜಿ.ರಸ್ತೆ, ಅಜಾದ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಾಯಿ ತೆರೆದುಕೊಂಡಿದೆ. ಅಮೃತ್ ಯೋಜನೆಯ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಒಂದೆರಡು ದಿನದಲ್ಲಿ ಗುಂಡಿಯನ್ನು ಮುಚ್ಚಲಾಗುವುದು ಎನ್ನುತ್ತಾರೆ. ಆದರೆ 1 ವರ್ಷದಿಂದ ಗುಂಡಿಯನ್ನು ಮುಚ್ಚದೆ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದಾರೆ.