ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉದ್ಘಾಟಿಸಿದರು. ಕೆ.ಜೆ.ಜಾರ್ಜ್, ಕೋಟ ಶ್ರೀನಿವಾಸಪೂಜಾರಿ, ಟಿ.ಡಿ.ರಾಜೇಗೌಡ, ಸಿ.ಟಿ.ರವಿ. ಎಚ್.ಡಿ.ತಮ್ಮಯ್ಯ, ಎಂ.ಕೆ.ಪ್ರಾಣೇಶ್, ಎಂ.ಜೆ.ದಿನೇಶ್ ಹಾಜರಿದ್ದರು.
ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉದ್ಘಾಟಿಸಿದರು. ಕೆ.ಜೆ.ಜಾರ್ಜ್, ಕೋಟ ಶ್ರೀನಿವಾಸಪೂಜಾರಿ, ಟಿ.ಡಿ.ರಾಜೇಗೌಡ, ಸಿ.ಟಿ.ರವಿ. ಎಚ್.ಡಿ.ತಮ್ಮಯ್ಯ, ಎಂ.ಕೆ.ಪ್ರಾಣೇಶ್, ಎಂ.ಜೆ.ದಿನೇಶ್ ಹಾಜರಿದ್ದರು.
Published on
ಬಾಳೆಹೊನ್ನೂರು: ಭಾರತದ ಕಾಫಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯುತ್ತಿದ್ದು, ವಿಶ್ವದಲ್ಲಿ ಕಾಫಿ ಉತ್ಪಾದನೆಯಲ್ಲಿ ಭಾರತ 7ನೇ ಸ್ಥಾನದಲ್ಲಿ, ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ಇಲ್ಲಿನ ಕಾಫಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.
ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಆರಂಭಗೊಂಡು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಸಿಆರ್‌ಎಸ್‌ನಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಫಿ ಉತ್ಪಾದನೆ, ಮಾರುಕಟ್ಟೆ  ಪ್ರತಿಯೊಂದರಲ್ಲಿ ಗುಣಮಟ್ಟ ಅಗತ್ಯ. ಈ ಬಗ್ಗೆ ಅಧ್ಯಯನ ಮಾಡಿ ಹೊಸ ಮಾರುಕಟ್ಟೆ ಮಾಡಬೇಕು. ಸಂಶೋಧನೆ ಜತೆಗೆ ಗುಣಮಟ್ಟ ಕಾಯ್ದುಕೊಳ್ಳಲು ಇ ಹಾಗೂ ಮಾರುಕಟ್ಟೆ ಬೆಳವಣಿಗೆಗೂ ಆದ್ಯತೆ ನೀಡಬೇಕು ಎಂದರು. 
ಕಾಫಿಯನ್ನು ಉತ್ತಮ ಗುಣಮಟ್ಟ, ಪ್ಯಾಕಿಂಗ್, ರಾಸಾಯನಿಕ ಕಡಿಮೆ ಮಾಡಿ ಬೆಳೆದಲ್ಲಿ ಜನರು ಹೆಚ್ಚು ಸ್ವೀಕರಿಸುತ್ತಾರೆ. ಕಾಫಿಗೆ ಶೇ.18ಇದ್ದ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಲಾಗಿದೆ. ಜಿಎಸ್‌ಟಿ ಬರುವ ಮುನ್ನ ವಿವಿಧ ತೆರಿಗೆಗಳೂ ಸೇರಿ ಕಾಫಿ ಮೇಲೆ ಶೇ.35ರಷ್ಟು ತೆರಿಗೆ ಇತ್ತು. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ಜಾರಿ ಮಾಡುವಾಗ ಎಲ್ಲ ರಾಜ್ಯಗಳ ಜತೆಗೆ ಚರ್ಚೆ ಮಾಡಿ ಶೇ.18 ನಿಗದಿ ಮಾಡಲಾಗಿತ್ತು. ಇದೀಗ ಎಲ್ಲ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿಯನ್ನು ಶೇ.5ರಿಂದ ಶೇ.0ಗೆ ಇಳಿಕೆ ಮಾಡಲಾಗಿದೆ ಎಂದರು.
ಕಾಫಿ ಸಂಶೋಧನಾ ಸಂಸ್ಥೆ ನೂರು ವರ್ಷ ಪೂರೈಸಿದ್ದು ದೇಶದ ಅತ್ಯುನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಲ್ಲಿ ಇದು ಒಂದು. ಸುಮಾರು 4ಲಕ್ಷ ಟನ್ ಕಾಫಿ ಉತ್ಪಾದನೆ ದೇಶದಲ್ಲಿ ಆಗುತ್ತಿದ್ದು ಶೇ.70 ರಷ್ಟನ್ನು ನಾವು ರಪ್ತು ಮಾಡುತ್ತಿದ್ದೇವೆ. ಶೇ.30 ಉತ್ಪನ್ನವನ್ನು ನಾವು ಸ್ಥಳೀಯವಾಗಿ ಭಾರತದಲ್ಲಿ ಬಳಕೆ ಮಾಡುತ್ತಿದ್ದೇವೆ. ಅನೇಕ ದೇಶಗಳು ಭಾರತದ ಜತೆಗೆ ತಾವಾಗಿಯೇ ಮುಂದೆ ಬಂದು ಪ್ರೀ ಟ್ರೇಡ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಿವೆ. ಶುಕ್ರವಾರ ಕ್ಯಾಬಿನೆಟ್‌ನಲ್ಲಿ ಯುಕೆ ಜತೆಗೆ ಪ್ರೀ ಟ್ರೇಡ್ ಅಗ್ರಿಮೆಂಟ್ ಆಗಿದೆ. ಸಂಪೂರ್ಣ ಯುರೋಪಿಯನ್ ರಾಷ್ಟ್ರಗಳ ಜತೆಗೆ ಆಗಿದೆ ಎಂದರು. 
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ, ಸಿಇಒ ಡಾ.ಕೂರ್ಮಾರಾವ್, ಸಂಶೋಧನಾ ನಿರ್ದೇಶಕ ಡಾ.ಸೆಂಥಿಲ್‌ಕುಮಾರ್, ಶಾಸಕ ಎಚ್.ಡಿ.ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಡಾ.ನಿತಿನ್ ಕುಮಾರ್ ಯಾದವ್, ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿ.ಬಿ.ನಿಂಗಯ್ಯ, ಕಾಫಿ ಮಂಡಳಿ ಸದಸ್ಯರಾದ ಭಾಸ್ಕರ್ ವೆನಿಲ್ಲಾ, ಡಾ.ಮಹಾಬಲರಾವ್, ಎ.ಜಿ.ದಿವಿನ್‌ರಾಜ್, ಡಾ.ಕೃಷ್ಣಾನಂದ ಮತ್ತಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net