ಶಿಕ್ಷಣದಿಂದ ಉಜ್ವಲ ಭವಿಷ್ಯ ನಿರ್ಮಾಣ

ಶೃಂಗೇರಿ ತಾಲೂಕು ಮೆಣಸೆಯ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬುದ್ಧ ಮಾತನಾಡಿದರು. ಅರುಣ್, ಉಷಾ, ಸಂಧ್ಯಾ ಮರಿಯಪ್ಪ ಇದ್ದರು
ಶೃಂಗೇರಿ ತಾಲೂಕು ಮೆಣಸೆಯ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬುದ್ಧ ಮಾತನಾಡಿದರು. ಅರುಣ್, ಉಷಾ, ಸಂಧ್ಯಾ ಮರಿಯಪ್ಪ ಇದ್ದರು
Published on
ಶೃಂಗೇರಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಯಶಾಲಿಗಳಾಗುವುದು ಸವಾಲಾಗಿದ್ದು ಇದಕ್ಕಾಗಿ ವಿದ್ಯಾರ್ಥಿಗಳು ವ್ಯಾಸಂಗದ ವೇಳೆಯಲ್ಲೇ ಸೂಕ್ತ ಪೂರ್ವಭಾವಿ ತಯಾರಿ ಮಾಡಿಕೊಳ್ಳಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬುದ್ಧ ಹೇಳಿದರು.
ತಾಲೂಕಿನ ಮೆಣಸೆಯ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 
ಸರ್ಕಾರಿ ಶಾಲೆಗಳಲ್ಲಿ ನಮಗೆ ಇಂದಿನಂತೆ ಸ್ಮಾರ್ಟ್ ಕ್ಲಾಸ್‌ಗಳಾಗಲಿ, ಇಂಟರ್ನೆಟ್ ಸೌಲಭ್ಯವಾಗಲಿ ಇರಲಿಲ್ಲ. ಒಂದು ಸಣ್ಣ ವಿಷಯ ತಿಳಿಯಬೇಕೆಂದರೂ ಮೈಲಿಗಟ್ಟಲೆ ನಡೆದು ಲೈಬ್ರರಿಗೆ ಹೋಗಬೇಕಿತ್ತು ಅಥವಾ ಶಿಕ್ಷಕರನ್ನೇ ಅವಲಂಬಿಸಬೇಕಿತ್ತು. ವಿದ್ಯಾರ್ಥಿಗಳು ವ್ಯಾಸಂಗದ ವೇಳೆಯಲ್ಲೇ ದೃಢ ನಿರ್ಧಾರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಸುತ್ತಮುತ್ತ ನಡೆಯುವ ಘಟನೆಗಳ ಕುರಿತು ಸಾಮಾನ್ಯ ಜ್ಞಾನವನ್ನು ಸಂಪಾದಿಸಬೇಕು ಎಂದರು. 
ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಕಾಳ್ಯ ಮಾತನಾಡಿ, ಇಂದು ಜಗತ್ತಿನ ಯಾವುದೇ ಮೂಲೆಯ ಶ್ರೇಷ್ಠ ಶಿಕ್ಷಣ ನಿಮ್ಮ ಬೆರಳ ತುದಿಯಲ್ಲಿದೆ. ಕೇವಲ ಪುಸ್ತಕದ ಬದನೆಕಾಯಿಯಾಗದೆ ಅನಿಮೇಷನ್ ಮತ್ತು ವಿಡಿಯೋಗಳ ಮೂಲಕ ವಿಜ್ಞಾನ-ಗಣಿತವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು ಎಂದರು.
ಪ್ರಬುದ್ಧ ಅವರಿಗೆ ಶಾಲೆಯಿಂದ ಸನ್ಮಾನಿಸಲಾಯಿತು. ಪ್ರಬುದ್ಧ ಅವರ ತಾಯಿ ಉಷಾ, ಎಸ್‌ಡಿಎಂಸಿ ಸದಸ್ಯರಾದ ಅರುಣ್, ಲಿಂಗಪ್ಪ, ಮರಿಸ್ವಾಮಿ, ಮುಖ್ಯ ಶಿಕ್ಷಕಿ ಜಯಂತಿ, ಗ್ರಾಪಂ ಮಾಜಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ, ಮಾಜಿ ಸದಸ್ಯರಾದ ಸುಷ್ಮಾ ಸುರೇಂದ್ರ, ತ್ರಿಮೂರ್ತಿ ಹೊಸ್ತೋಟ ಮತ್ತು ಶಿಕ್ಷಕರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net