ಆದ್ಯತೆಯ ಮೇರೆಗೆ ಬಿಎಸ್‌ಎನ್‌ಎಲ್ ಟವರ್

ಬಾಳೆಹೊನ್ನೂರು ಸಮೀಪದ ಮಣಬೂರು ಗ್ರಾಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ವಿನೋದ್, ಭಾಸ್ಕರ್ ವೆನಿಲ್ಲಾ, ಮಣಿಕಂಠನ್, ದೀಪಕ್, ಅರುಣ್‌ಕುಮಾರ್, ವಾಸು ಮತ್ತಿತರರಿದ್ದರು.
ಬಾಳೆಹೊನ್ನೂರು ಸಮೀಪದ ಮಣಬೂರು ಗ್ರಾಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ವಿನೋದ್, ಭಾಸ್ಕರ್ ವೆನಿಲ್ಲಾ, ಮಣಿಕಂಠನ್, ದೀಪಕ್, ಅರುಣ್‌ಕುಮಾರ್, ವಾಸು ಮತ್ತಿತರರಿದ್ದರು.
Published on
 ಬಾಳೆಹೊನ್ನೂರು: ಗ್ರಾಮೀಣ ಭಾಗಗಳಿಗೆ ಆದ್ಯತೆ ಮೇರೆಗೆ ಕೇಂದ್ರ ಸರ್ಕಾರದಿಂದ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಮಂಜೂರು ಮಾಡಿ ಗ್ರಾಮೀಣ ಜನರ ಸೇವೆಗೆ ಸಮರ್ಪಿಸಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಮಣಬೂರು ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ನೂತನ ಟವರ್ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಗ್ರಾಮೀಣ ಜನರಿಗೆ ಸಂವಹನ ನಡೆಸಲು ಮೊಬೈಲ್, ದೂರವಾಣಿಗಳ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಆದ್ಯತೆಯ ಮೇರೆಗೆ ನೂತನವಾದ ಬಿಎಸ್‌ಎನ್‌ಎಲ್ ಟವರ್‌ಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಬಹಳಷ್ಟು ಬಿಎಸ್‌ಎನ್‌ಎಲ್ ಟವರ್‌ಗಳನ್ನು ನಿರ್ಮಾಣ ಮಾಡಿದ್ದು, ಹಲವು ಕಡೆಗಳಲ್ಲಿ ಕಾರ್ಯಾರಂಭಗೊಳಿಸಲಾಗಿದೆ. ಅಗತ್ಯವಿರುವಲ್ಲಿ ಇನ್ನಷ್ಟು ಟವರ್‌ಗಳನ್ನು ನಿರ್ಮಾಣ ಮಾಡಿಸಲು ಕ್ರಮವಹಿಸಲಾಗುವುದು ಎಂದರು. 
ಕ್ಷೇತ್ರದಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣ ಮಾತ್ರವಲ್ಲದೆ ಗ್ರಾಮೀಣ ರಸ್ತೆಗಳು, ಹಲವಾರು ಮುಖ್ಯರಸ್ತೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನಗಳನ್ನು ಕೇಂದ್ರದಿಂದ ತರಲಾಗಿದ್ದು, ಹಲವು ಕಡೆಗಳಲ್ಲಿ ಕಾಮಗಾರಿಗಳಾಗಿವೆ. ವಿವಿಧ ನೂತನ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು ಅವುಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ-ಶೃಂಗೇರಿ-ಮಂಗಳೂರು ನೂತನ ರೈಲ್ವೆ ಮಾರ್ಗ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದ್ದು, ಕ್ಷೇತ್ರದ ಸಾರ್ವಜನಿಕರು ಎನ್.ಆರ್.ಪುರ-ಶೃಂಗೇರಿ ಮಾರ್ಗವಾಗಿ ಮಾರ್ಗ ರೂಪಿಸುವಂತೆ ಕೋರಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ವಿನೋದ್ ಬೊಗಸೆ, ಪಿಎಂ ವಿಶ್ವಕರ್ಮ ಯೋಜನೆ ಜಿಲ್ಲಾ ಸಮಿತಿ ಸದಸ್ಯ ಭಾಸ್ಕರ್ ವೆನಿಲ್ಲಾ, ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ, ಪ್ರಮುಖರಾದ ದೀಪಕ್ ದೊಡ್ಡಯ್ಯ, ಅರುಣ್‌ಕುಮಾರ್, ಮಣಬೂರು ರಾಜು, ಎಂ.ಆರ್.ಸುರೇಂದ್ರ, ಎಂ.ಆರ್.ಮಹೇಶ್, ಬಿ.ಎಚ್.ಶಂಕರ್, ಸುರೇಶ್, ಎಂ.ಎಂ.ಸಂದೀಪ್, ವಾಸು ಹುಯಿಗೆರೆ, ಪ್ರಭಾಕರ್ ಪ್ರಣಸ್ವಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net