ರಕ್ತ ಕೃತಕ ಸೃಷ್ಟಿ ಅಸಾಧ್ಯ

ಳೆಹೊನ್ನೂರಿನ ಜೆಸಿಐ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ರಕ್ತದಾನಿಗಳ ಚಾರ್ಟ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ಸನತ್ ಶೆಟ್ಟಿ, ಸಮೀರ್, ಇಬ್ರಾಹಿಂ ಶಾಫಿ, ಅಂಕಿತ್ ಹೊನ್ನಳ್ಳಿ, ಹಿತೈಶಿ, ರಾ.ವೆಂಕಟೇಶ್, ಸುಧಾಕರ್, ಚೈತನ್ಯ ವೆಂಕಿ ಇತರರಿದ್ದರು.
ಳೆಹೊನ್ನೂರಿನ ಜೆಸಿಐ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ರಕ್ತದಾನಿಗಳ ಚಾರ್ಟ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ಸನತ್ ಶೆಟ್ಟಿ, ಸಮೀರ್, ಇಬ್ರಾಹಿಂ ಶಾಫಿ, ಅಂಕಿತ್ ಹೊನ್ನಳ್ಳಿ, ಹಿತೈಶಿ, ರಾ.ವೆಂಕಟೇಶ್, ಸುಧಾಕರ್, ಚೈತನ್ಯ ವೆಂಕಿ ಇತರರಿದ್ದರು.
Published on
ಬಾಳೆಹೊನ್ನೂರು: ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯ ವಸ್ತು ಬೇರೊಂದಿಲ್ಲ ಎಂದು ಚಿಕ್ಕಮಗಳೂರಿನ ಹೋಲಿಕ್ರಾಸ್ ಆಸ್ಪತ್ರೆ ರಕ್ತನಿಧಿ ಕೇಂದ್ರದ ಪಿಆರ್‌ಒ ಸಮೀರ್ ಹೇಳಿದರು. 
ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್‌ನಿಂದ ಚಿಕ್ಕಮಗಳೂರು ಹೋಲಿಕ್ರಾಸ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. 
ಮಾನವನ ದೇಹದಲ್ಲಿ ರಕ್ತ ಕಡಿಮೆಯಾದರೆ ವಿವಿಧ ರೋಗಬಾಧೆ ಕಾಡಲಿದೆ. ವಿಶ್ವದಲ್ಲಿ ವಿಜ್ಞಾನ ಬಹಳಷ್ಟು ಮುಂದುವರಿದಿದ್ದು ಚಂದ್ರಲೋಕಕ್ಕೂ ಮಾನವ ಕಾಲಿಟ್ಟು ಬಂದಿದ್ದಾನೆ. ಪ್ರಾಪಂಚಿಕವಾಗಿ ಬೇರೆ ಬೇರೆ ಸಾಧನೆ, ಸಂಶೋಧನೆಗಳನ್ನು ಮಾಡಲಾಗಿದೆ. ಆದರೆ ರಕ್ತಕ್ಕೆ ಪರ್ಯಾಯವಾದ ಯಾವುದೇ ವಸ್ತುವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದರು.
ಜೆಸಿಐ ಅಧ್ಯಕ್ಷ ಬಿ.ಎಸ್.ಸನತ್ ಶೆಟ್ಟಿ ಮಾತನಾಡಿ, ಜೆಸಿಐ ಹಲವಾರು ವರ್ಷಗಳಿಂದ ವಿವಿಧ ರಕ್ತನಿಧಿ ಕೇಂದ್ರಗಳಿಗೆ ಶಿಬಿರಗಳ ಮೂಲಕ ರಕ್ತ ಸಂಗ್ರಹ ಮಾಡಿಕೊಟ್ಟಿದ್ದು ಈ ಬಾರಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಶಿಬಿರವನ್ನು ಆಯೋಜಿಸಿದ್ದು 132 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಇದು ದಾಖಲೆಯ ಯೂನಿಟ್ ರಕ್ತ ಸಂಗ್ರಹವಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಗತ್ಯವುಳ್ಳವರಿಗೆ ತಲುಪಲಿದೆ. ನೇತ್ರ ತಪಾಸಣೆ ಸಹ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಮನುಷ್ಯನಿಗೆ ಆರೋಗ್ಯವೇ ಮುಖ್ಯ. ಆರೋಗ್ಯವಿದ್ದರೆ ಜೀವನದಲ್ಲಿ ಎಲ್ಲ ಸಂಪತ್ತನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜೆಸಿಐ ಆರೋಗ್ಯ ಶಿಬಿರಗಳಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ನೇತ್ರ ತಪಾಸಣೆಯಲ್ಲಿ ಅಗತ್ಯವುಳ್ಳವರಿಗೆ ಕನ್ನಡಕ, ಶಸ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಜೆಸಿಐ  ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.
ಜೆಸಿಐ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಶಾಫಿ, ಉಪಾಧ್ಯಕ್ಷ ಎಚ್.ಜಿ.ಅಂಕಿತ್ ಹೊನ್ನಳ್ಳಿ, ಲೇಡಿ ಜೇಸಿ ಅಧ್ಯಕ್ಷೆ ಹಿತೈಶಿ ಚೇತನ್, ಬಂಟರ ಸಂಘದ ಮಾಜಿ ಅಧ್ಯಕ್ಷ ರಾ.ವೆಂಕಟೇಶ್, ರಕ್ತನಿಧಿ ಕೇಂದ್ರದ ಡಾ. ನವ್ಯಾ, ಆಕಾಶ್, ಪೂರ್ವಾಧ್ಯಕ್ಷ ಸುಧಾಕರ್, ಚೈತನ್ಯ ವೆಂಕಿ, ಸಿ.ಪಿ.ರಮೇಶ್, ಎಚ್.ಜೆ.ರಚನ್, ಎಸ್.ಎಲ್.ಚೇತನ್, ಸುರೇಂದ್ರ, ಎಚ್.ಗೋಪಾಲ್, ರಿಚರ್ಡ್ ಮಥಾಯಿಸ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net