ಪುನುಗುಬೆಕ್ಕು ಬೇಟೆಗಾರರ ಬಂಧನ

 ಪುನುಗುಬೆಕ್ಕುಗಳನ್ನು ಬೇಟೆಯಾಡಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದರು. ಪುನುಗುಬೆಕ್ಕುಗಳ ಕಳೇಬರ, ಬಂದೂಕು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪುನುಗುಬೆಕ್ಕುಗಳನ್ನು ಬೇಟೆಯಾಡಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದರು. ಪುನುಗುಬೆಕ್ಕುಗಳ ಕಳೇಬರ, ಬಂದೂಕು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Published on
 ಮೂಡಿಗೆರೆ: ಪುನುಗುಬೆಕ್ಕುಗಳನ್ನು ಬೇಟೆಯಾಡಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬೇಟೆಗೆ ಬಳಸಿದ ವಸ್ತುಗಳು ಹಾಗೂ ವಾಹನವನ್ನು ಜೋಗಣಕೆರೆ ಬಸ್ ನಿಲ್ದಾಣದ ಸಮೀಪ ವಶಪಡಿಸಿಕೊಂಡಿದ್ದಾರೆ.
ಅಬಚೂರು ಗ್ರಾಮದ ನಂದನ್, ಹಾಲೂರು ಗ್ರಾಮದ ಆದರ್ಶ ಬಂಧಿತ ಆರೋಪಿಗಳು. ಮೂಡಿಗೆರೆ ವಲಯದ ಆಲೂರು ಜೋಗಣ್ಣಕೆರೆ ಬಸ್ ತಂಗುದಾಣದ ಬಳಿ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ವಾಹನ ನಿಲ್ಲಿಸದೆ ಆರೋಪಿಗಳು ವೇಗವಾಗಿ ಮುಂದಕ್ಕೆ ಹೋಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ವಾಹನವನ್ನು ಬೆನ್ನಟ್ಟಿ ತಡೆದು ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಮೃತಪಟ್ಟ 3 ಪುನುಗು ಬೆಕ್ಕುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ವಾಹನದಲ್ಲಿದ್ದ ನಾಲ್ವರ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಹಳೇಮೂಡಿಗೆರೆ ಗ್ರಾಮದ ಪ್ರೀತಮ್, ಹಾಲೂರು ಗ್ರಾಮದ ಚಿದಾನಂದ ತಪ್ಪಿಸಿಕೊಂಡಿದ್ದಾರೆ. ಕೃತ್ಯಕ್ಕೆ ಎಚ್.ಜಿ.ಕರುಣಾಕರಮೂರ್ತಿ, ಚಿಕ್ಕಮಗಳೂರು ತಾಲೂಕಿನ ಮಾರ್ಲೆ ಗ್ರಾಮದ ಕೃಷ್ಣಪ್ಪ ಸಹಕಾರ ನೀಡಿದ್ದಾರೆಂದು ತಿಳಿದು ಬಂದಿದೆ. ಇನ್ನೂ ನಾಲ್ವರು ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ವಾಹನದಲ್ಲಿದ್ದ 3 ಪುನುಗು ಬೆಕ್ಕುಗಳ ಕಳೇಬರ, ಕೃತ್ಯಕ್ಕೆ ಬಳಸಿದ 2 ಒಂಟಿ ನಳಿಕೆ ಬಂದೂಕು, 4 ತೋಟ, 1 ಟಾರ್ಚ್, ಆರೋಪಿಗಳ 2 ಮೊಬೈಲ್ ಹಾಗೂ ಕಳ್ಳ ಸಾಗಣೆೆಗೆ ಬಳಸಿದ ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. 
 ಆರ್‌ಎಫ್‌ಒ ಮಂಜುನಾಥ್, ಗೋಣಿಬೀಡು ಉಪವಲಯ ಅರಣ್ಯಾಧಿಕಾರಿ ರವಿರಾಜ್, ಗಸ್ತು ಅರಣ್ಯಪಾಲಕರಾದ ಪರಮೇಶ್, ಎ.ವಿ.ಶಿವರಾಜ್, ವಿ.ಎಸ್.ಆದರ್ಶ, ವಾಚರ್ ಬಿ.ಕೆ.ಉದಯ್, ನವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net