ಬೈರಾಪುರದ ಅಂಗನವಾಡಿ, ಸರ್ಕಾರಿ ಪ್ರಾಥಮಿಕ ಶಾಲೆಗೆ ಮರಾಠಿಕ್ಯಾಂಪ್ ಹಾಗೂ ಚೌಡಿಕಟ್ಟೆ ಮಕ್ಕಳು ಸುಮಾರು 3 ಕಿ.ಮೀ ದೂರದಿಂದ ಬರಬೇಕು. ಮೂರು ಕಿ.ಮೀ ರಸ್ತೆ ಸಂಪೂರ್ಣ ಭದ್ರಾ ವೈಲ್ಡ್‌ಲೈಫ್ ಪ್ರದೇಶವಾಗಿದೆ. ಅಂಗನವಾಡಿ, ಶಾಲೆಗೆ, ಪಟ್ಟಣಕ್ಕೆ ಸಂಚರಿಸಲು ಇದೊಂದೇ ದಾರಿ. ಯಾವುದೇ ಪರ್ಯಾಯ ದಾರಿ ಇರುವುದಿಲ್ಲ. ಮಕ್ಕಳು ಜೂ.9ರಂದು ಶಾಲೆಗೆ ಹೋಗಿ ಬರುವಾಗ ಸಂಜೆ ಕಾಡು ದಾರಿಯಲ್ಲಿ ಚಿರತೆ ಮಕ್ಕಳನ್ನು ಓಡಿಸಿಕೊಂಡು ಬಂದಿದೆ. ಮಕ್ಕಳು ದಿಕ್ಕಾಪಾಲಾಗಿ ಓಡಿ ಬಂದಿದ್ದಾರೆ. ಮಕ್ಕಳು ಹೆದರಿ ಶಾಲೆ, ಅಂಗನವಾಡಿಗೆ ಹೋಗುವುದಿಲ್ಲ ಎಂದು ಮನೆಯಲ್ಲಿಯೇ ಇದ್ದಾರೆ. ಮಕ್ಕಳನ್ನು ಶಾಲೆಗೆ, ಅಂಗನವಾಡಿಗೆ ಕಳುಹಿಸಲು ನಮಗೂ ಭಯವಾಗುತ್ತಿದೆ. ಚಿರತೆ ಹಾಗೂ ಹುಲಿ ಸಂಚಾರವಿರುವುದರಿಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲೆಗೆ, ಅಂಗನವಾಡಿಗೆ ಮಕ್ಕಳು ಹೋಗಿಬರಲು ಪರ್ಯಾಯ ದಾರಿ ಕಂಡುಕೊಡಬೇಕೆಂದು ಮನವಿ ಮಾಡಿದ್ದಾರೆ. ಮುತ್ತಿನಕೊಪ್ಪ ಗ್ರಾಮಸ್ಥರಾದ ಬಾಗು, ಬೀರು, ಪಾಂಡು, ನಾಗರಾಜ್ ಇತರರಿದ್ದರು.