ಈ ವೇಳೆ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಮಾತನಾಡಿ, ಅಂಬಳೆ ಹೋಬಳಿ, ಹೊಸ ಕೋಟೆ ಗ್ರಾಮದಲ್ಲಿ ೩.೧೧ ಗುಂಟೆ ಕುಳವಾಡಿಕೆ ಇನಾಂ ಜಾಗವಾಗಿದೆ. ಈ ಜಾಗದ ಮಾಲೀಕರ ವಂಶಸ್ಥರು ಮೃತರಾಗಿದ್ದು ಉಳಿದ ೨ ಎಕರೆ ಜಾಗವಿದ್ದು ಈ ಜಾಗಕ್ಕೆ ಕೆಲವರು ಅಕ್ರಮವಾಗಿ ಮನೆ ನಿರ್ಮಾಣ ಜೊತೆಗೆ ಮೇಲ್ವರ್ಗದವರು ಪರಿಶಿಷ್ಟರ ಜಾಗದಲ್ಲಿ ಗುಡಿಸಲು ನಿರ್ಮಿಸಿದ್ದಾರೆ ಎಂದರು.
ಕಳೆದ ಏಪ್ರೀಲ್‌ನಲ್ಲಿ ಗ್ರಾಮದ ಕೆಲವು ಯುವಕರು ಈ ಜಾಗದಲ್ಲಿ ಅಂಭೇಡ್ಕರ್ ಜಯಂತಿ ಕಾರ್ಯಕ್ರ ಮ ಮಾಡಲು ತೆರಳಿದಾಗ ಅವರ ಮೇಲೆ ಹಲ್ಲೆ ಮಾಡಿ ದಲಿತ ದೌರ್ಜನ್ಯವೆಸಗಿದ್ದರು. ಸುಮಾರು ೨೩ ಜನರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದೆ ಎಂದು ಹೇಳಿದರು.
ಅಲ್ಲದೇ ಬಂಟಿಂಗ್ಸ್‌ಗಳನ್ನು ಕಿತ್ತುಹಾಕಿದ್ದು ಇವರ ಮೇಲು ಸಹ ಹಿಂದಿನ ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಇದುವರೆಗೂ ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಈಗಲೂ ಸಹ ಅಕ್ರಮವಾಗಿ ಗುಡಿಸಲು ನಿರ್ಮಿಸುವವರ ವಿರುದ್ಧ ತಹಸೀಲ್ದಾರ್, ಗ್ರಾ.ಪಂ. ಪಿಡಿಓ ಸೇರಿದಂತೆ ವಿವಿಧ ಅಧಿಕಾರಿ ವೃಂದಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ಆದ್ದರಿಂದ ಕೂಡಲೇ ಜಿಲ್ಲಾಡಳೀತ ಮನವಿಯನ್ನು ಪರಿಗಣಿಸಿ ಪರಿಶಿಷ್ಟರ ಜಾಗವನ್ನು ಉಳಿಸಿಕೊಡ ಬೇಕು. ಒಂದು ವೇಳೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಡಿಎಸ್ಎಸ್‌ನಿಂದ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡರಾದ ಸಂತೋಷ್ ಲಕ್ಯಾ, ಆನಂದ್ ಹೊಸಕೋಟೆ, ಸಿದ್ದಯ್ಯ, ಹೇಮಂತ್ ಗೌಡನಹಳ್ಳಿ, ಸುಜೇಂದ್ರ ಲಕ್ಯಾ ಮುಂತಾದವರು ಉಪಸ್ಥಿತರಿದ್ದರು.