ಅಂಬೇಡ್ಕರ್ ಮಾನವಹಕ್ಕುಗಳ ಪ್ರತಿಪಾದಕ

ಮುತ್ತಿನಕೊಪ್ಪ ಗ್ರಾಪಂ ಆವರಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸಿದರು. ಟಿ.ಡಿ.ರಾಜೇಗೌಡ, ಡಾ. ಕೆ.ಪಿ.ಅಂಶುಮಂತ್, ಬಿ.ಎಸ್.ಸುಬ್ರಹ್ಮಣ್ಯ, ನೀಲಮ್ಮ, ನರೇಂದ್ರ, ಬಿ.ಕೆ.ನಾರಾಯಣಸ್ವಾಮಿ, ಡಾ. ನೂರುಲ್‌ಹುದಾ, ಎಚ್.ಡಿ.ನವೀನ್‌ಕುಮಾರ್ ಇತರರಿದ್ದರು.
ಮುತ್ತಿನಕೊಪ್ಪ ಗ್ರಾಪಂ ಆವರಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸಿದರು. ಟಿ.ಡಿ.ರಾಜೇಗೌಡ, ಡಾ. ಕೆ.ಪಿ.ಅಂಶುಮಂತ್, ಬಿ.ಎಸ್.ಸುಬ್ರಹ್ಮಣ್ಯ, ನೀಲಮ್ಮ, ನರೇಂದ್ರ, ಬಿ.ಕೆ.ನಾರಾಯಣಸ್ವಾಮಿ, ಡಾ. ನೂರುಲ್‌ಹುದಾ, ಎಚ್.ಡಿ.ನವೀನ್‌ಕುಮಾರ್ ಇತರರಿದ್ದರು.
Published on
ಎನ್.ಆರ್.ಪುರ; ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಉತ್ತಮ ಆಡಳಿತಗಾರ ಹಾಗೂ ಮಾನವಹಕ್ಕುಗಳ ಪ್ರತಿಪಾದಕರಾಗಿ ಮಹಾನ್ ಕೊಡುಗೆ ನೀಡಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.
ಮುತ್ತಿನಕೊಪ್ಪ ಗ್ರಾಪಂನಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಗ್ರಾಪಂ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಹಾಗೂ ಸಂವಿಧಾನ ಕುರಿತು ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ, ಅರ್ಥ ಮಾಡಿಕೊಂಡು ಅದರಂತೆ ನಡೆಯಬೇಕು. ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ ನಮಿಸಿದರೆ ಸಾಲದು. ಬದಲಾಗಿ ಅಂಬೇಡ್ಕರ್ ಅವರಲ್ಲಿದ್ದ ಜ್ಞಾನವನ್ನು ತಿಳಿದುಕೊಳ್ಳಬೇಕು. ಸಂವಿಧಾನ ಓದುವುದು ಎಂದರೆ ಅಂಬೇಡ್ಕರ್ ಅವರನ್ನು ಓದುವುದು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಪ್ರತಿ ಧರ್ಮಕ್ಕೂ ಬೇರೆ, ಬೇರೆ ಹಬ್ಬಗಳಿವೆ. ಇಡೀ ಭಾರತೀಯರಿಗೆ ಸ್ವಾತಂತ್ರೃ ದಿನಾಚರಣೆ, ಗಣರಾಜ್ಯೋತ್ಸವ, ಸಂವಿಧಾನ ದಿನ ಪ್ರಮುಖ ಹಬ್ಬಗಳಾಗಿವೆ ಎಂದರು.
ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಮುತ್ತಿನಕೊಪ್ಪ ಗ್ರಾಪಂ ಶೃಂಗೇರಿ ಕ್ಷೇತ್ರದ ಹೆಬ್ಬಾಗಿಲಾಗಿದ್ದು ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದರು.
ಜನಸಂಗ್ರಾಮ ವೇದಿಕೆಯ ಕೆ.ಎಲ್.ಅಶೋಕ್ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶ, ಮೌಲ್ಯ ಹಾಗೂ ಸಂವಿಧಾನದ ಪೀಠಿಕೆಯಲ್ಲಿರುವ ಪ್ರತಿ ಅಂಶವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸಂವಿಧಾನ ಎಂಬುದು ಹಕ್ಕು, ಕರ್ತವ್ಯದ ಪುಸ್ತಕವಲ್ಲ. ಅಖಂಡ ಭಾರತವನ್ನು ಒಗ್ಗೂಡಿಸುವ ಮಾನವ ಗ್ರಂಥ. ಅಂಬೇಡ್ಕರ್ ಬರೆದಿರುವ ಸಂವಿಧಾನ ಸರ್ವಕಾಲಕ್ಕೂ ಅನ್ವಯವಾಗುತ್ತದೆ ಎಂದರು. 
ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮುತ್ತಿನಕೊಪ್ಪ ಗ್ರಾಮದಲ್ಲಿ ಅದ್ದೂರಿ ಜಾಥಾ ನಡೆಯಿತು. ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ, ವಕೀಲ ಕೆ.ಪಿ.ಶ್ರೀಪಾಲ್, ಗ್ರಾಪಂ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಎನ್.ಎಸ್.ನರೇಂದ್ರ, ತಹಸೀಲ್ದಾರ್ ಡಾ. ನೂರುಲ್‌ಹುದಾ, ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಬಿಇಒ ಶಬಾನಾ ಅಂಜುಮ್, ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net