ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಜೇಸಿ ಪರಿವಾರದ ಸಾನ್ವಿತ ಭಾಸ್ಕರ್, ವಿಸ್ಮಯ ಪ್ರಶಾಂತ್‌ಕುಮಾರ್, ಇನಿದ ಸತೀಶ್, ವೈಷ್ಣವ್‌ರಾಜ್ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಅಧ್ಯಕ್ಷ ಬಿ.ಎಸ್.ಸನತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ಎ.ರಂಜಿತ್, ಖಜಾಂಚಿ ವಿ.ರೋಹಿತ್, ಪೂರ್ವಾಧ್ಯಕ್ಷ ಭಾಸ್ಕರ್ ವೆನಿಲ್ಲಾ, ಸುರೇಂದ್ರ ಮಾಸ್ತರ್, ಅಹ್ಮದ್ ಜಮೀರ್, ಚೈತನ್ಯ ವೆಂಕಿ, ಸುಧಾಕರ್, ರಿಚರ್ಡ್ ಮಥಾಯಿಸ್ ಮತ್ತಿತರರಿದ್ದರು.