ನಗರದ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಲಯನ್ಸ್ ಸಂಸ್ಥೆ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ `ಮಡಿಲು’ ಶೀರ್ಷಿಕೆಯಡಿ ಆಯೋಜಿಸಿದ್ದ ಪೂರ್ವಿ ಗಾನಯಾನದ ೧೧೯ನೇ ಸರಣಿಯ `ಮಮತೆಯ ಮಡಿಲಿಗಿದು ಗೀತ ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸನ್ಯಾಸಿಗಳು ಯಾರ ಕಾಲಿಗೂ ನಮಸ್ಕರಿಸುವ ಕ್ರಮ ನಮ್ಮಲ್ಲಿಲ್ಲ. ಆದರೆ ತಾಯಿ ಕಾಲಿಗೆ ಸನ್ಯಾಸಿ ನಮಸ್ಕರಿಸುವ ಕ್ರಮ ಇದೆ; ಅಂತಹ ಶ್ರೇಷ್ಠ ಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ನೀಡಲಾಗಿದೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಮಾತನಾಡಿ, ಅಮ್ಮ ಎನ್ನುವ ಪದಕ್ಕೆ ಪರ್ಯಾಯ ಶಬ್ದವಾಗಲಿ, ಪಾತ್ರವಾಗಲಿ, ಭಾವನೆಗಳಾಗಲಿ ಇಲ್ಲ ಎಂದು ವಿಶ್ವದ ಅನೇಕ ಕವಿಗಳು ಹೇಳಿದ್ದಾರೆ. ಹಾಗಾಗಿ ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಮುಗಿಯದು. ನಮ್ಮ ದೇಶದಲ್ಲಿ ನೆಲೆಗಟ್ಟಿನಲ್ಲೇ ಮಾತೃ ದೇವೋ ಭವ ಎಂದು ಸಂಸ್ಕೃತಿಯ ಬೇರುಗಳಲ್ಲೇ ಬಂದಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಎಲ್.ಗೋಪಿಕೃಷ್ಣ, ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿದರು. ಲಯನ್ಸ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸಿ.ಎನ್.ಕುಮಾರ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟಾçರ್ ಡಾ.ಸಿ.ಕೆ.ಸುಬ್ಬರಾಯ ಕಾರ್ಯಕ್ರಮದಲ್ಲಿದ್ದರು. ಎಂ.ಎಸ್.ಸುಧೀರ್ ಸ್ವಾಗತ, ಸುಮಾ ಪ್ರಸಾದ್ ಕಾರ್ಯಕ್ರಮ ನಿರೂಪಣೆ, ರೂಪಾ ನಾಯ್ಕ್ ವಂದನಾರ್ಪಣೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ದಿನದ ಮಹತ್ವದ ಪ್ರಯುಕ್ತ ಗಾಯಕರು ಹಾಗೂ ನಿರೂಪಕರು ಮತ್ತು ಅವರ ತಾಯಂದಿರನ್ನು ಗೌರವಿಸಲಾಯಿತು.
ಆನಂತರ ಗಾಯಕ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ನಡೆದ ಕಾವ್ಯ ಗಾಯನದಲ್ಲಿ ರಮ್ಯಾ ಪ್ರಸನ್ನ, ಶೃತಿ ಮಹೇಶ್, ಮಹೇಶ್ ಪ್ರಿಯದರ್ಶನ್. ಚೇತನ್ ರಾಮ್, ರೂಪಾ ಅಶ್ವಿನ್, ಅನುಷ, ಪೃಥ್ವಿಶ್ರೀ, ಮೇಘ, ಅರ್ಪಿತಾ, ಕೆ.ಎಸ್.ಚಿನ್ಮಯಿ ತಾಯಿಯ ಮಹತ್ವದ ಕುರಿತಾದ ಗೀತೆಗಳನ್ನು ಭಾವಪೂರ್ಣವಾಗಿ ಹಾಡಿ ಗಮನ ಸೆಳೆದರು. ವಾದ್ಯ ಸಹಕಾರದಲ್ಲಿ ಸಮರ್ಥ ಹೆಗಡೆ (ಕೊಳಲು), ವಿಠಲ್ ರಂಗಧೋಳ್ (ತಬಲಾ) ಹಾಗೂ ಮೆಲ್ವಿನ್ ಲೀಮಾ (ಕೀಬೋರ್ಡ್) ಸಿ.ಎಂ.ಮೋಹನ್ ಕುಮಾರ್ (ರಿದಂ ಪ್ಯಾಡ್) ಸಾಥ್ ನೀಡಿದ್ದರು.