ಚಾರ್ಮಾಡಿ ಘಾಟ್‌ನಲ್ಲಿ ಒಂಟಿ ಕಾಡಾನೆ ಪ್ರತ್ಯಕ್ಷ

ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಬದಿಯ ಎತ್ತರ ಪ್ರದೇಶದಲ್ಲಿ ಬುಧವಾರ ಒಂಟಿ ಕಾಡಾನೆ ಕಾಣಿಸಿಕೊಂಡಿರುವುದು.
ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಬದಿಯ ಎತ್ತರ ಪ್ರದೇಶದಲ್ಲಿ ಬುಧವಾರ ಒಂಟಿ ಕಾಡಾನೆ ಕಾಣಿಸಿಕೊಂಡಿರುವುದು.
Published on
ಮೂಡಿಗೆರೆ: ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ 3ನೇ ತಿರುವಿನಲ್ಲಿ ಒಂಟಿ ಕಾಡಾನೆ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡಿದೆ. ಇದರಿಂದ ರಸ್ತೆಯಲ್ಲಿ ಸಾಗುವ ವಾಹನ ಚಾಲಕರು ಮತ್ತು ಪ್ರಯಾಣಿಕರು ಜೀವಭಯದಲ್ಲಿ ಸಾಗುವಂತಾಗಿದೆ.
ಎತ್ತರ ಪ್ರದೇಶದಲ್ಲಿ ನಿಂತಿದ್ದ ಕಾಡಾನೆ ಹೆದ್ದಾರಿಗೆ ಇಳಿಯಲು ಜಾಗ ಹುಡುಕುತ್ತಿತ್ತು. ಕೆಳಗಿಳಿಯಲು ಸಾಧ್ಯವಾಗದೆ ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ನಿಂತಿತ್ತು. ಕಡಿದಾದ ತಗ್ಗು ಪ್ರದೇಶವಾಗಿದ್ದರಿಂದ ಇಳಿಮುಖವಾಗಿ ರಸ್ತೆಗೆ ಇಳಿದರೆ ಮುಗ್ಗರಿಸಿ ಬೀಳುವ ಭೀತಿಯಿಂದ ಸುರಕ್ಷಿತ ದಾರಿ ಹುಡುಕುತ್ತಿದ್ದ ಕಾಡಾನೆಯನ್ನು ಕಂಡವವರು ಭಯಗೊಂಡು ತಮ್ಮ ವಾಹನಗಳನ್ನು ನಿಲ್ಲಿಸಿದರು.
ಘಾಟ್ ಪ್ರದೇಶದ ರಸ್ತೆಯುದ್ಧಕ್ಕೂ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಲು ಸ್ಥಳದಲ್ಲಿದ್ದವರಿಗೆ ಸಾಧ್ಯವಾಗಲಿಲ್ಲ. ಅನಾರೋಗ್ಯ ಪೀಡಿತರು ಮಂಗಳೂರು ಆಸ್ಪತ್ರೆಯನ್ನು ಹೆಚ್ಚಾಗಿ ಅವಲಂಬಿಸಿರುತ್ತಾರೆ. ದಿನದ ಯಾವುದೆ ಸಮಯದಲ್ಲಾದರೂ ರೋಗಿಗಳನ್ನು ಆಂಬುಲೆನ್ಸ್ ಅಥವಾ ಇತರ ವಾಹನಗಳಲ್ಲಿ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಕರೆದೊಯ್ಯಬೇಕಾಗಿದೆ. ಘಾಟ್ ಹೆದ್ದಾರಿಯಲ್ಲಿ ಕಾಡಾನೆಗಳು ಎದುರಾದರೆ ವಾಹನಗಳು ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ರೋಗಿಗಳು ಆಸ್ಪತ್ರೆ ಸೇರಲು ತಡವಾಗುತ್ತದೆ. ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಕಾಲ ಕಳೆಯಬೇಕಾಗುತ್ತದೆ. ಮಂಗಳೂರು, ಉಡುಪಿ ಜಿಲ್ಲೆಗಳ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net