ಕೆರೆಗೆ ಬಂದ ಕಾಡಾನೆಗಳ ಹಿಂಡು

ಎನ್.ಆರ್.ಪುರ ತಾಲೂಕು ಕುಸುಬೂರು ಗ್ರಾಮದ ಹೊಸಕೊಪ್ಪದ ಕೆರೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು.
ಎನ್.ಆರ್.ಪುರ ತಾಲೂಕು ಕುಸುಬೂರು ಗ್ರಾಮದ ಹೊಸಕೊಪ್ಪದ ಕೆರೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು.
Published on
ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಪಂ ಕುಸುಬೂರು ಗ್ರಾಮದ ಹೊಸಕೊಪ್ಪದ ಕೃಷಿಕ ಯತಿರಾಜ್ ಅವರ ತೋಟದ ಪಕ್ಕದ ಕೆರೆಗೆ 10 ಕಾಡಾನೆಗಳ ಹಿಂಡು ಭಾನುವಾರ ಮಧ್ಯಾಹ್ನ 12ಕ್ಕೆ ಬಂದು ನೀರು ಕುಡಿದು ಸ್ವಲ್ಪ ಹೊತ್ತು ನೀರಿನಲ್ಲೇ ಆಟವಾಡಿ ಹೋಗಿವೆ.
ಹೊಸಕೊಪ್ಪದ ಕೃಷಿಕರೊಬ್ಬರು ಕಾಡಾನೆಗಳ ದಾಳಿ ತಡೆಯಲು ತೋಟಕ್ಕೆ ಐಬೆಕ್ಸ್ ಬೇಲಿ ಮಾಡಿದ್ದಾರೆ. ಈ ಬೇಲಿಯ ದುರಸ್ತಿಗಾಗಿ ತೋಟಕ್ಕೆ ಬಂದಾಗ ಬೇಲಿಯ ಪಕ್ಕದ ದೊಡ್ಡ ಕೆರೆಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿದೆ. ಇನ್ನೂ ಸ್ವಲ್ಪ ದೂರದಲ್ಲಿ 8 ಕಾಡಾನೆಗಳ ಮತ್ತೊಂದು ಹಿಂಡು ಬಿದಿರು ಮುರಿಯುತ್ತಿರುವ ದೃಶ್ಯವೂ ಕಂಡಿದೆ. 
ಒಂದು ವಾರದಿಂದಲೂ ಕುಸುಬೂರು ಕಾಲನಿ, ಹೊಸಕೊಪ್ಪ, ಸಾತ್ಕೋಳಿ, ಆರಂಬಳ್ಳಿ, ಎಕ್ಕಡಬೈಲು ಭಾಗದಲ್ಲಿ 3 ಕಾಡಾನೆಗಳ ಹಿಂಡು ಸುತ್ತಾಡುತ್ತಿದೆ. ಒಂದು ಹಿಂಡಿನಲ್ಲಿ 10 ಕಾಡಾನೆ, ಮತ್ತೊಂದು ಹಿಂಡಿನಲ್ಲಿ 8 ಕಾಡಾನೆ ಹಾಗೂ ಒಂಟಿ ಆನೆ ಸುತ್ತಾಡುತ್ತಿದೆ.
ಎಲಿೆಂಟ್ ಟಾಸ್ಕ್‌ಫೋರ್ಸ್ ಹಾಗೂ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಓಡಿಸಿದರೆ ಮತ್ತೊಂದು ಕಾಡಿಗೆ ಹೋಗುತ್ತಿವೆ. ಈ 5 ಹಳ್ಳಿಗಳಲ್ಲಿ ಹೆಚ್ಚಾಗಿ ಬಿದಿರು ಇರುವುದೇ ಇಲ್ಲಿ ಸುತ್ತಾಡಲು ಕಾರಣವಾಗಿರಬಹುದು. ಐದೂ ಹಳ್ಳಿಗಳಲ್ಲಿ ರಾತ್ರಿ ಹೊತ್ತು ರಸ್ತೆಯಲ್ಲಿ ಓಡಾಡುವುದಕ್ಕೆ ಗ್ರಾಮಸ್ಥರು ಭಯಪಡುತ್ತಿದ್ದರು. ಈಗ ಹಗಲು ಹೊತ್ತಿನಲ್ಲೂ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುತ್ತಿದ್ದೇವೆ ಎನ್ನುತ್ತಾರೆ ಹೊಸಕೊಪ್ಪ ಕೃಷಿಕ ಯತಿರಾಜ್ ಹಾಗೂ ಗ್ರಾಮಸ್ಥರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net