ಜಿ.ಹೊಸಳ್ಳಿ ಗ್ರಾಮದ ದೀಪಕ್, ನಾಗರಾಜ್, ಚಂದ್ರಿಕಾ, ಮಂಜುನಾಥ್, ಸತ್ಯನಾರಾಯಣ ಮತ್ತು ಕೃಷ್ಣಮೂರ್ತಿ ಎಂಬುವವರ ಕಾಫಿ ತೋಟದಲ್ಲಿ ಫಸಲಿಗೆ ಬಂದಿರುವ ಕಾಫಿ, ಅಡಕೆ, ಕಾಳುಮೆಣಸು, ಬಾಳೆ ಮತ್ತಿತರ ಗಿಡಗಳನ್ನು ನಾಶಪಡಿಸಿವೆ. ಒಮ್ಮೆಲೆ 11 ಕಾಡಾನೆ ಹಿಂಡು ಗ್ರಾಮದ ಭತ್ತದ ಗದ್ದೆಯಲ್ಲಿ ಅತ್ತಿತ್ತ ತಿರುಗಾಡಿದ್ದರಿಂದ ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಭತ್ತದ ಪೈರು ನೆಲಕಚ್ಚಿದೆ.