ಬಿಜೆಪಿ-ಜೆಡಿಎಸ್ ಬೆಂಬಲಿತ 7 ಮಂದಿ ಗೆಲುವು

ಮೂಡಿಗೆರೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಪಡೆದ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಮತದಾರರು ಅಭಿನಂದಿಸುತ್ತಿರುವುದು. ಪಿ.ಜಿ.ಅನುಕುಮಾರ್, ಎಂ.ಕೆ.ಚಂದ್ರೇಶ್, ಗಣೇಶ್, ಬಿ.ಎಲ್.ವಿದ್ಯಾ, ಎಸ್.ಸಿ.ಪುಟ್ಟಮ್ಮ, ಟಿ.ಎ.ಶೇಖರ ಬಂಗೇರ, ರಮೇಶ್, ವಿಕೆ.ಶಿವೇಗೌಡ, ಭರತ್ ಇತರದಿದ್ದರು.
ಮೂಡಿಗೆರೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಪಡೆದ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಮತದಾರರು ಅಭಿನಂದಿಸುತ್ತಿರುವುದು. ಪಿ.ಜಿ.ಅನುಕುಮಾರ್, ಎಂ.ಕೆ.ಚಂದ್ರೇಶ್, ಗಣೇಶ್, ಬಿ.ಎಲ್.ವಿದ್ಯಾ, ಎಸ್.ಸಿ.ಪುಟ್ಟಮ್ಮ, ಟಿ.ಎ.ಶೇಖರ ಬಂಗೇರ, ರಮೇಶ್, ವಿಕೆ.ಶಿವೇಗೌಡ, ಭರತ್ ಇತರದಿದ್ದರು.
Published on
ಮೂಡಿಗೆರೆ: ರಾಜಕೀಯ ಪಕ್ಷಗಳು ಇಬ್ಬಾಗವಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಸಿ ಭಾರಿ ಪೈಪೋಟಿ ನಡೆದಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಭಾನುವಾರ ನಡೆದು ಸಂಜೆ ಮತ ಎಣಿಕೆ ಆರಂಭವಾಗಿ ಅದೆ ದಿನ ತಡರಾತ್ರಿ ಫಲಿತಾಂಶ ಪ್ರಕಟವಾಗಿದೆ.
 8 ಮಂದಿ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್‌ನಿಂದ ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆ ಹೆಸರಿನಲ್ಲಿ ಮತ್ತು ಬಿಜೆಪಿ-ಜೆಡಿಎಸ್‌ನಿಂದ ಎನ್‌ಡಿಎ ಹೆಸರಿನಲ್ಲಿ 2 ತಂಡಗಳಾಗಿ ತಲಾ 8 ರಂತೆ 16 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆಯಿಂದ ರಂಜನ್ ಅಜಿತ್ ಕುಮಾರ್ ಒಬ್ಬರು ಮಾತ್ರ ಗೆಲುವು ಪಡೆದಿದ್ದಾರೆ. ಉಳಿದ 7 ಮಂದಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಬೆಂಬಲಿತ ಎನ್‌ಡಿಎ ಅಭ್ಯರ್ಥಿಗಳ ಪೈಕಿ ಎಚ್.ಎಸ್.ಮಂಜುನಾಥ್ ಒಬ್ಬರು ಮಾತ್ರ ಸೋತಿದ್ದಾರೆ. ಉಳಿದ 7 ಮಂದಿ ಗೆಲುವು ಪಡೆದಿದ್ದಾರೆ. 
ಸೋಲು ಕಂಡಿರುವ ಎಚ್.ಎಸ್.ಮಂಜುನಾಥ್ ಮೂಲತಃ ಜೆಡಿಎಸ್ ಪಕ್ಷದವರು. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಅವರ ಎದುರು 35 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. 1043 ಮತಗಳ ಪೈಕಿ 1015 ಮತ ಚಲಾವಣೆಯಾಗಿದೆ. ಪ್ರತಿಯೊಬ್ಬ ಮತದಾರ ತಲಾ 8 ಮತ ಚಲಾಯಿಸಿದ್ದಾರೆ. ಟಿಎಪಿಸಿಎಂಎಸ್‌ಗೆ ಸೇರಿದ ರೈತ ಭವನದಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಿತು. ಸಂಜೆ 5ರಿಂದ ಮತ ಎಣಿಕೆ ಕಾರ್ಯ ಆರಂಭಗೊಂಡು ರಾತ್ರಿ 10ಕ್ಕೆ ಫಲಿತಾಂಶ ಪ್ರಕಟವಾಗಿದೆ. 
2020ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ 7 ಮಂದಿ ಅಭ್ಯರ್ಥಿಗಳು, 2015ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ 8 ಮಂದಿ ಗೆಲುವು ಪಡೆದಿದ್ದರು. 2 ಬಾರಿಯೂ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಸೋಲು ಕಂಡಿತ್ತು. 2020ರಲ್ಲಿ ಬಿಜೆಪಿ ಬೆಂಬಲಿತ ಬಿ.ಎನ್.ಜಯಂತ್ ಅಲ್ಪಮತದ ಅಂತರದಲ್ಲಿ ಜಯಗಳಿಸಿದ್ದರು. ಆಗ ಟಿಎಪಿಸಿಎಂಎಸ್‌ನಲ್ಲಿ 3338 ಮಂದಿ ಮತದಾರರಿದ್ದರು. ಈ ಬಾರಿ ವಿವಿಧ ಕಾರಣದಿಂದ 2295 ಮಂದಿ ಷೇರುದಾರರು ಮತದಾನದಿಂದ ಹೊರಗುಳಿದಿದ್ದಾರೆ. ಎ ದರ್ಜೆಯ 5 ಕೃಷಿ ಪತ್ತಿನ ಸಹಕಾರ ಸಂಘದಿಂದ ಟಿಎಪಿಸಿಎಂಎಸ್ ಸದಸ್ಯರಾಗಿ ಐದು ಮಂದಿ ಆಯ್ಕೆಯಾಗಿದ್ದಾರೆ. ಗೋಣಿಬೀಡಿನಿಂದ ವಿ.ಕೆ.ಶಿವೇಗೌಡ, ಮಾಕೋನಹಳ್ಳಿಯಿಂದ ಎಂ.ಎಲ್.ಕಲ್ಲೇಶ್, ನಂದಿಪುರದಿಂದ ಜಿ.ಎಂ.ಪ್ರಸನ್ನ, ಬಣಕಲ್ನಿಂದ ಟಿ.ಎಂ.ಗಜೇಂದ್ರ, ಬಿದರಹಳ್ಳಿಯಿಂದ ಎಂ.ಎನ್.ಪ್ರಸನ್ನ, ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ಬಲಿಗೆ ಗ್ರಾಮದ ಈಶ್ವರ ಈಗಾಗಲೆ ಆಯ್ಕೆಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net