ಅದೃಷ್ಟದ ತಾಮ್ರದ ಚೊಂಬು ಕೊಡಿಸುವುದಾಗಿ ಹೇಳಿ ವಂಚನೆ

ಅದೃಷ್ಟ ತರುವ ತಾಮ್ರದ ಚೊಂಬು ನೀಡುವುದಾಗಿ ನಂಬಿಸಿ 50 ಸಾವಿರ ರೂ. ಮುಂಗಡ ಹಣ ಪಡೆದು ವಂಚಿಸಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅದೃಷ್ಟ ಚೊಂಬು ಕೊಡಿಸುವುದಾಗಿ ವಂಚಿಸಿದ ತಂಡದ ಮೇಲೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿದರು.
ಅದೃಷ್ಟ ಚೊಂಬು ಕೊಡಿಸುವುದಾಗಿ ವಂಚಿಸಿದ ತಂಡದ ಮೇಲೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿದರು.
Published on

ಚಿಂತಾಮಣಿ: ಅದೃಷ್ಟ ತರುವ ತಾಮ್ರದ ಚೊಂಬು ನೀಡುವುದಾಗಿ ನಂಬಿಸಿ 50 ಸಾವಿರ ರೂ. ಮುಂಗಡ ಹಣ ಪಡೆದು ವಂಚಿಸಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಂಧ್ರದ ಚಿತ್ತೂರು ಜಿಲ್ಲೆಯ ವಿಕೋಟ ಪಟ್ಟಣದ ಎಸ್​.ನಯಾಜ್​ (32)ಗೆ 20 ದಿನಗಳ ಹಿಂದೆ ಚೆನ್ನೆ$ನಲ್ಲಿ ವಾಸವಾಗಿರುವ ಚಂದ್ರಮ್ಮ ಎಂಬುವವರು ಪರಿಚಯವಾಗಿದ್ದರು. ಈ ವೇಳೆ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ ಎಂದು ನಯಾಜ್​ ಹೇಳಿಕೊಂಡಾಗ, ಚಿಂತಾಮಣಿಯ ಹುಲುಗುಮ್ಮನಹಳ್ಳಿಯ ನಾಗೇಶ ಬಳಿ 100 ವರ್ಷ ಹಳೆಯದಾದ ಅದೃಷ್ಟ ತರುವ 5 ಲಕ್ಷ ರೂ. ಮೌಲ್ಯದ ತಾಮ್ರದ ತಂಬಿಗೆ ಇದ್ದು, ಅದನ್ನು ಅಂಗಡಿ ಅಥವಾ ಮನೆಯಲ್ಲಿ ಇಟ್ಟರೆ ಅದೃಷ್ಟ ಒಲಿದು ವ್ಯಾಪಾರದಲ್ಲಿ ಪ್ರಗತಿ ಸಾಧಿಸಿ ಶ್ರೀಮಂತರಾಗಬಹುದು ಎಂದು ನಂಬಿಸಿ, 1 ಲಕ್ಷ ಮುಂಗಡ ನೀಡುವಂತೆ ಚಂದ್ರಮ್ಮ ತಿಳಿಸಿದ್ದಾರೆ.

ಚಂದ್ರಮ್ಮ ಸೂಚನೆಯಂತೆ ಐದು ದಿನಗಳ ಹಿಂದೆ ಕೈವಾರದ ದೇವಸ್ಥಾನವೊಂದರ ಬಳಿ ತೆರಳಿದಾಗ ನಾಗೇಶ, ಬಲರಾಮ್​, ದಣಾಮೂರ್ತಿ ಹಾಗೂ ಆದಿಲ್​ ಪಾಷಾ ಅವರೊಂದಿಗೆ ಬಂದಿದ್ದ ಚಂದ್ರಮ್ಮ, ನಾಗೇಶ ಅವರು ಚೊಂಬಿನ ವ್ಯವಹಾರ ನಡೆಸಲಿದ್ದು, ಆದಿಲ್​ ಪಾಷಾ ಅವರು ಚೊಂಬು ಪರೀಸುವ ಸೈಂಟಿಸ್ಟ್​ ಎಂದು ಪರಿಚಯ ಮಾಡಿಸಿದ್ದಳು. ಇದನ್ನು ನಂಬಿದ ನಯಾಜ್​ 50 ಸಾವಿರ ಮುಂಗಡವಾಗಿ ನೀಡಿದ್ದರು. ಮೂರು ದಿನಗಳ ಬಳಿಕ ಚೊಂಬು ನೀಡುವುದಾಗಿ ನಾಗೇಶ ಹೇಳಿದ್ದರಿಂದ ಸೆ.20ರಂದು ಸಂಜೆ ಕೈವಾರದ ಬಳಿ ನಯಾಜ್​ ತೆರಳಿದಾಗ ನಾಗೇಶ ತಾಮ್ರದ ಚೊಂಬು ತಂದು ತೋರಿಸಿದ. ಅನುಮಾನಗೊಂಡು ಪ್ರಶ್ನಿಸಿದಾಗ, ಐವರೂ ಚೊಂಬನ್ನು ವಾಪಸ್​ ಪಡೆದು ಅಲ್ಲಿಂದ ತೆರಳಿದರೆನ್ನಲಾಗಿದೆ. ಆಗ ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದ್ದು, ಈ ಸಂಬಂಧ ಚಂದ್ರಮ್ಮ, ನಾಗೇಶ, ಬಲರಾಮ್​, ದಣಮೂರ್ತಿ, ಆದಿಲ್​ ಪಾಷಾ ವಿರುದ್ಧ ನಯಾಜ್​ ದೂರು ದಾಖಲಿಸಿದ್ದಾರೆ.

ಚಿಂತಾಮಣಿ ತಾಲೂಕಿನ ಹುಲುಗುಮ್ಮನಹಳ್ಳಿಯ ನಾಗೇಶ್​ ಎಂಬಾತ ವೆಂಕಟಾಪುರ ಗ್ರಾಮದ ಮನೆಯ ಬಳಿ ಎರಡು ಕಾರುಗಳಲ್ಲಿ ತಮಿಳುನಾಡು ಮತ್ತು ಆಂಧ್ರದವರನ್ನು ಕರೆಸಿಕೊಂಡಿದ್ದ ಎನ್ನಲಾಗಿದೆ. ಈ ಮಾಹಿತಿ ಆಧಾರ ಮೇಲೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ಐವರನ್ನು ಬಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net